ಮಂಗಳೂರು: ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯದ ಕೆಲವೆಡೆ ಭೀಕರ ಮಳೆ ಸುರಿಯುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ಮಧ್ಯಾಹ್ನದ ನಂತರ ಮಳೆ ಸುರಿಯುತ್ತಲೇ ಇದ್ದು ಹಲವೆಡೆ ಅವಘಡಗಳು ಸಂಭವಿಸಿದೆ. ಇಂದು ರಾಮಲ್ ಕಟ್ಟೆಯ ಬಂಟರ ಭವನದ ಬಳಿ ಖ್ಯಾತ ವಕೀಲರಾದ ಶಿವಾನಂದ ವಿಟ್ಲ ರವರು ಸಂಚರಿಸುತ್ತಿದ್ದ ಕಾರ್ ನ ಟೈರ್ ಬ್ಲಾಸ್ಟ್ ಆಗಿ ಹೆದ್ದಾರಿಯಲ್ಲಿ ಸಿನಿಮೀಯ ರೀತಿಯಲ್ಲಿ ಗಿರಕಿ ಹೊಡೆದು ಪಕ್ಕದಲ್ಲಿದ್ದ ಡಿವೈಡರ್ ಮೇಲೆ ಏರಿ ನಿಂತಿದೆ.
ವಾಹನದಲ್ಲಿ ಶಿವಾನಂದರು ಹಾಗೂ ಅವರ ಸಹ ಉದ್ಯೋಗಿ ಕೋರ್ಟ್ ಕೇಸ್ ನಿರ್ವಹಿಸಲು ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು ಸದ್ಯ ಅದೃಷ್ಟವಶಾತ್ ಯಾವುದೇ ದೈಹಿಕ ಹಾನಿ ಉಂಟಾಗಿಲ್ಲ.