Home ಕರಾವಳಿ ಉಡುಪಿ: ಹೋಮ್ ನರ್ಸ್ ನಿಂದ 31 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, ನಗದು ಕಳವು

ಉಡುಪಿ: ಹೋಮ್ ನರ್ಸ್ ನಿಂದ 31 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, ನಗದು ಕಳವು

0

ಉಡುಪಿ: ವೃದ್ಧೆಯೊಬ್ಬರ ಆರೈಕೆಗಾಗಿ ನಿಯೋಜನೆಗೊಂಡಿದ್ದ ಹೋಮ್ ನರ್ಸ್ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿಯ ಬಡಗುಬೆಟ್ಟುವಿನ ಪ್ರಸಾದ್ (57) ಎಂಬುವರು 15 ದಿನಗಳ ಹಿಂದೆ ಉಡುಪಿಯ ಪರ್ಕಳ ಪ್ರದೇಶದಲ್ಲಿನ ಹೆಲ್ತ್ ಕೇರ್ ಸರ್ವಿಸ್ ಮೂಲಕ ಹೋಮ್ ನರ್ಸ್ ಸಿದ್ದಪ್ಪ ಕೆ ಕೋಡ್ಲಿ ಅವರನ್ನು ತಮ್ಮ ತಂದೆಯ ಆರೈಕೆಗಾಗಿ ನೇಮಿಸಿಕೊಂಡಿದ್ದರು.

ನ. 17 ರಂದು, ಬೆಳಿಗ್ಗೆ 9:15 ರಿಂದ ಮಧ್ಯಾಹ್ನ 1:15 ರ ನಡುವೆ, ಸಿದ್ದಪ್ಪ ಅವರು ಮನೆಯ ಹಾಲ್‌ನ ಗಾಜಿನ ರ‍್ಯಾಕ್‌ನಲ್ಲಿ ಇರಿಸಲಾಗಿದ್ದ ಅಂದಾಜು 43,800 ಮೌಲ್ಯದ 6 ಗ್ರಾಂ ವಜ್ರದ ಕಿವಿಯೋಲೆಯನ್ನು ಕದ್ದಿದ್ದಾರೆ. ಜೊತೆಗೆ ಮಲಗುವ ಕೋಣೆಯಲ್ಲಿದ್ದ ರಹಸ್ಯ ಲಾಕರ್‌ನಿಂದ 31,17,100 ಮೌಲ್ಯದ ಚಿನ್ನಾಭರಣ ಹಾಗೂ ವಜ್ರಾಭರಣಗಳನ್ನು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಕಳುವಾದ ವಸ್ತುಗಳ ಒಟ್ಟು ತೂಕ 427 ಗ್ರಾಂ ಎಂದು ಅಂದಾಜಿಸಲಾಗಿದೆ.

ಪ್ರಸಾದ್ ರವರು ನೀಡಿದ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 194/2024 ಕಲಂ 306 ಬಿ.ಎನ್.ಎಸ್. ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿ ಪತ್ತೆಗೆ ಹುಡುಕಾಟ ಆರಂಭಿಸಿದ್ದಾರೆ.

LEAVE A REPLY

Please enter your comment!
Please enter your name here