ಹೈದರ್ಬಾದ್: ಕನ್ನಡ ಚೆಲುವೆ ಶ್ರೀಲೀಲಾ ಬಹುಭಾಷಾ ಬೆಡಗಿಯಾಗಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರುವ ಬೆಡಗಿ ಶ್ರೀಲೀಲಾ ವೈಯಕ್ತಿಕ ಜೀವನದ ಕುರಿತು ಸುದ್ದಿ ಹರಿದಾಡುತ್ತಿದೆ. ಹೌದು ತೆಲುಗು ನಟನೊಬ್ಬನೊಂದಿಗೆ ಶ್ರೀಲೀಲಾ ಡೇಟಿಂಗ್ ಮಾಡುತ್ತಿದ್ದಾರೆ.
ಮೆಗಸ್ಟಾರ್ ಚಿರಂಜೀವಿ ಕುಟುಂಬದವರಾದ ನಟ ಪಂಜಾ ವೈಷ್ಣವ್ ತೇಜ್ ಅವರ ಜತೆ ಶ್ರೀಲೀಲಾ ರಿಲೇಷನ್ ಶಿಪ್ನಲ್ಲದ್ದಾರೆ ಎನ್ನುವ ಸುದ್ದಿ ಟಾಲಿವುಡ್ ವಲಯದಲ್ಲಿ ಹರಿದಾಡಿದೆ.ಶ್ರೀಲೀಲಾ ಹಾಗೂ ವೈಷ್ಣವ್ ಜತೆ ಆದಿಕೇಶವ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಸಂದರ್ಭದಲ್ಲಿ ಇಬ್ಬರು ಆತ್ಮೀಯರಾಗಿದ್ದರು. ಇವರ ಇಬ್ಬರ ಕುಟುಂಬಗಳು ಈ ಸಂಬಂಧಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಸದ್ಯ ಈ ಸಂಬಂಧ ಕುರಿತು ಶ್ರೀಲೀಲಾ , ವೈಷ್ಣವ್ ಇಬ್ಬರೂ ಕೂಡ ಇದಕ್ಕೆ ಪ್ರತಿಕ್ರಿಯಿಸಬೇಕಿದೆ.