Home ಕರಾವಳಿ ಮಂಗಳೂರು ದಸರಾ ಸಂಭ್ರಮಾಚರಣೆಯಲ್ಲಿನ ತುಳುನಾಡ ಸಾಂಪ್ರದಾಯಿಕ ಕಲೆಯ ಗತ್ತಿನ ಪ್ರದರ್ಶನ

ಮಂಗಳೂರು ದಸರಾ ಸಂಭ್ರಮಾಚರಣೆಯಲ್ಲಿನ ತುಳುನಾಡ ಸಾಂಪ್ರದಾಯಿಕ ಕಲೆಯ ಗತ್ತಿನ ಪ್ರದರ್ಶನ

0

ಮಂಗಳೂರು: ಈಗಾಗಲೇ ಘೋಷಿತವಾಗಿ, ಮಂಗಳೂರು ದಸರಾ ಸಂಭ್ರಮಾಚರಣೆಯ ಪ್ರಯುಕ್ತ, ತುಳುನಾಡ ಸಾಂಪ್ರದಾಯಿಕ ಕಲೆಯ ಗತ್ತಿನ ಪ್ರದರ್ಶನವನ್ನು ಇದೇ 13-10-2024 ರಂದು ಸಂಜೆ 2:30 ಗಂಟೆಗೆ ಎಂಜಿ ರಸ್ತೆ ದೀಪಾ ಕಂಫರ್ಟ್ಸ್ ಹತ್ತಿರ ಆಯೋಜಿಸಲಾಗಿದೆ.


ಈ ಕಾರ್ಯಕ್ರಮವು ಶ್ರೀ ಪ್ರಮೋದ್ ಕರ್ಕೇರರ ನೇತೃತ್ವದಲ್ಲಿ ಮತ್ತು ಶ್ರೀ ರವಿರಾಜ್ ಚೌಟರ ಸಹಭಾಗಿತ್ವದಲ್ಲಿ ನಡೆಯಲಿದೆ. ಎಬಿವಿಪಿ ವಿಭಾಗದ ಪ್ರಮುಖರಾದ ಶ್ರೀ ಕೇಶವ ಬಂಗೇರರವರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.

 

ಈ ಕಾರ್ಯಕ್ರಮವನ್ನು ದೀಪಕ್ ಅಡ್ಯಾರ್ ನಿರೂಪಿಸಲಿದ್ದಾರೆ. ಜೊತೆಗೆ, ಶ್ರೀ ಭ್ರಮರಿ ಚೆಂಡೆ ಮತ್ತು ಕುಮಾರಿ ಆಧ್ಯಾ ವಿಜಯನ್ ಅವರ ವಯೊಲಿನ್ ಫ್ಯೂಶನ್, ಹಾಗೂ ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್‌ನ ರೀ. ಜಗದಾಂಬ ಹುಲಿ ಮತ್ತು ಟೀಮ್ ಕರಾವಳಿ ಟೈಗರ್ಸ್ ಬಾಬು ಗುಡ್ಡ ಇವರಿಂದ ಹುಲಿವೇಷಗಳ ಪ್ರದರ್ಶನ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯಾತೀತರು ಭಾಗವಹಿಸಲಿದ್ದಾರೆ. ಮತ್ತು, ಸಾಧನೆಗೈದ ಕ್ರೀಡಾಪಟುವಿಗೆ ಸನ್ಮಾನ ಸಮಾರಂಭವೂ ನಡೆಯಲಿದೆ.

ಈ ಸಂದರ್ಭ, ಟೀಮ್ ಪಿಲಿ ಅಜನೆಯ ಸದಸ್ಯರಾದ ಕಾರ್ತಿಕ್, ಹಿತೇಶ್ ಮತ್ತು ಜಯೇಶ್ ರವರು, ಎಲ್ಲರಿಗೂ ಪಿಲಿ ಅಜನೆ ಕಾರ್ಯಕ್ರಮಕ್ಕೆ ಹಾಜರಾಗುವಂತೆ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here