ಉಡುಪಿ: ಆನ್ ಲೈನ್ ಟ್ರೇಡಿಂಗ್ ವಂಚನೆ ಪ್ರಕರಣದ ಇನ್ನೊಬ್ಬ ಆರೋಪಿಯನ್ನು ಉಡುಪಿ ನಗರದ ಸೆನ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಕೇರಳ ನಿವಾಸಿ ಅಜ್ಮಲ್ ಸುಹೈಲ್ ಸಿ(19) ಎಂದು ತಿಳಿದು ಬಂದಿದೆ.
ಬಂಧನವಾದ ಆರೋಪಿಯಿಂದ 80,000/- ನಗದು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ವಿವರ:
ಪಿರ್ಯಾದಿದಾರರಾದ ಉಪೇಂದ್ರ ಅಂಬಲಪಾಡಿ ಉಡುಪಿ ರವರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ WhatsApp ನಲ್ಲಿ ಮೋತಿಲಾಲ್ ಒಸ್ವಾಲ್ ಪ್ರೈವೇಟ್ ಲಿಮಿಟೆಡ್ ಮ್ಯಾನೇಜ್‌ಮೆಂಟ್ ಗ್ರೂಪ್ ಸೇರಿಸಿದ್ದು. ಪಿರ್ಯಾದಿದಾರಿಗೆ ಮೋತಿಲಾಲ್ ಒಸ್ವಾಲ್ ಪ್ರೈವೇಟ್ ಲಿಮಿಟೆಡ್ ಮ್ಯಾನೇಜ್‌ಮೆಂಟ್ ಗ್ರೂಪ್‌ನ VIP-203-845 ಎಂಬ ಅಕೌಂಟ್ ನ್ನು ನೀಡಿರುತ್ತಾರೆ. ಪಿರ್ಯಾದಿದಾರರಿಗೆ ಮೊ.ನಂ 7842874635 ಮತ್ತು 6391854496 ನೇದರಿಂದ Whats App ನಲ್ಲಿ ಟ್ರೇಡಿಂಗ್ ಬಗ್ಗೆ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ಪಿರ್ಯಾದಿದಾರರನ್ನುನಂಬಿಸಿ, ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ,ಒಟ್ಟು 33,10,000/- ಹಣವನ್ನು ಡಿಪಾಸಿಟ್ ಮಾಡಿಸಿಕೊಂಡಿರುತ್ತಾರೆ. ತದನಂತರ ಪಿರ್ಯಾದಿದಾರಿಗೆ ಹೂಡಿಕೆ ಮಾಡಿದ ಹಣ ಮತ್ತು ಲಾಭಾಂಶವನ್ನು ನೀಡದೇ ಮೋಸ ಮಾಡಿರುವುದಾಗಿದೆ.
ಈ ಪ್ರಕರಣಕ್ಕೆ ಸಂಬಂದಿಸಿದಂತೆ ಇಗಾಗಲೆ 4 ಜನ ಆರೋಪಿಗಳನ್ನು ಬಂಧಿಸಿ 13,00,00/- ನಗದನ್ನು ವಶಪಡಿಸಿಕೊಳ್ಳಲಾಗಿದೆ. ಉಡುಪಿ ಸೆನ್ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರು ತನಿಖೆ ಮುಂದುವರೆಸಿ ತಲೆಮರೆಸಿಕೊಂಡಿರುವ ಇನ್ನೊಬ್ಬ ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿ ಆರೋಪಿ ಅಜ್ಮಲ್ ಸುಹೈಲ್ ಸಿ(19), ಕೋಝೀಕ್ಕೋಡ್, ಕೇರಳ ರಾಜ್ಯ ಎಂಬವನನ್ನು ಪತ್ತೆ ಹಚ್ಚಿ, ಆತನಿಂದ ಸದ್ರಿ ಪ್ರಕರಣದಲ್ಲಿ ಬ್ಯಾಂಕ್ ಖಾತೆಗೆ ಜಮೆಗೊಂಡಿರುವ ನಗದು ರೂ 80,000/- ವನ್ನು ಸ್ವಾಧೀನಪಡಿಸಿ ಕೊಂಡಿರುತ್ತಾರೆ.