ಪುತ್ತೂರು ಸಮೀಪದ ಬಂಟಾಜೆ ರಕ್ಷಿತಾರಣ್ಯದಲ್ಲಿ ಮರಗಳಿಂದ ತೊಗಟೆಯನ್ನು ಕೆತ್ತಿ ಸಾಗಾಟ ಮಾಡಿದ ಕೇರಳದ ಮೂವರು ಆರೋಪಿಗಳನ್ನು ಪುತ್ತೂರು ಅರಣ್ಯ ಇಲಾಖೆಯವರು ಬಂಧಿಸಿದ ಘಟನೆ ಸಂಭವಿಸಿದೆ
ಬಂಧಿತ ಆರೋಪಿಗಳು ಕಾಸರಗೋಡು ಜಿಲ್ಲೆಯ ಬದಿಯಡ್ಕದ ಸುನಿಲ್ ಕುಮಾರ್, ಸುರೇಶ್, ದಿನೇಶ್ ಎಂದು ತಿಳಿಯಲಾಗಿದೆ
ಬನ್ಪು, ಅಂಡಿಪುನರ್, ಬೇಂಗ ಜಾತಿಯ ಮರಗಳ ತೊಗಟೆಯನ್ನು ಕೆತ್ತಿ ಕೊಂಡೊಯ್ಯಲಾಗಿದೆ. ತೊಗಟೆ ಕೆತ್ತುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬಂದಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂದಿಸಿದ್ದಾರೆ.
ಬಂಧಿತ ಮೂವರು ಆರೋಪಿಗಳನ್ನು ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.