Home ತಾಜಾ ಸುದ್ದಿ ಶೀಘ್ರವೇ ‘ಆಪರೇಷನ್ ಅಕ್ರಮ BPL ಕಾರ್ಡ್’ ಪತ್ತೆ ಕಾರ್ಯಾಚರಣೆ ಆರಂಭ: 4 ಚಕ್ರದ ವಾಹನ ಇರೋರ...

ಶೀಘ್ರವೇ ‘ಆಪರೇಷನ್ ಅಕ್ರಮ BPL ಕಾರ್ಡ್’ ಪತ್ತೆ ಕಾರ್ಯಾಚರಣೆ ಆರಂಭ: 4 ಚಕ್ರದ ವಾಹನ ಇರೋರ ‘ಕಾರ್ಡ್ ರದ್ದು’

0

ಬೆಂಗಳೂರು: ರಾಜ್ಯ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸೋದಕ್ಕೆ ಹೆಣಗಾಡುತ್ತಿದೆ. ಅಲ್ಲದೇ ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿರುವುದು ಗ್ಯಾರಂಟಿ ಯೋಜನೆಯ ಹಣ ಹೆಚ್ಚು ಖರ್ಚಾಗುತ್ತಿರೋದಕ್ಕೂ ಕಾರಣವಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಶೀಘ್ರವೇ ಅಕ್ರಮ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಸಂಬಂಧ ಆಪರೇಷನ್ ಕಾರ್ಯಾಚರಣೆ ಆರಂಭಿಸಲಾಗುತ್ತಿದೆ.


ರಾಜ್ಯ ಸರ್ಕಾರದಿಂದ ಬಿಪಿಎಲ್ ಕಾರ್ಡ್ ಗೆ ಕೆಲವೊಂದು ಷರತ್ತು ವಿಧಿಸೋದಕ್ಕೆ ಪ್ಲಾನ್ ಮಾಡಿದೆಯಂತೆ. ಅದರಿಂದ 25,000 ಕೋಟಿ ರೂ ಉಳಿತಾಯಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ. ಈ ಕಾರಣದಿಂದಲೇ ಅಕ್ಟೋಬರ್ ವೇಳೆಗೆ ಆಪರೇಷನ್ ಬಿಪಿಎಲ್ ಕಾರ್ಡ್ ಚಾಲನೆಗೊಳಿಸುತ್ತಿದೆ. ಇದಕ್ಕೆ ಸಿಎಂ ಸಿದ್ಧರಾಮಯ್ಯ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಅನರ್ಹರು ಪಡೆದಿರುವಂತ ಬಿಪಿಎಲ್ ಕಾರ್ಡ್ ಗಳನ್ನು ಪತ್ತೆಗೆ ಇಳಿಯುವಂತ ಅಧಿಕಾರಿಗಳು, ಅಂತಹ ಕಾರ್ಡ್ ಗಳನ್ನು ರದ್ದುಗೊಳಿಸೋ ಪ್ರಕ್ರಿಯೆಯನ್ನು ಶುರು ಮಾಡಲಿದ್ದಾರೆ. ಈ ಮೂಲಕ ಸಹಜವಾಗಿಯೇ ಗ್ಯಾರಂಟಿ ಯೋಜನೆಗಳಿಂದ ಫಲಾನುಭವಿಗಳು ಹೊರಗುಳಿಸುವಂತ ಮಾಸ್ಟರ್ ಪ್ಲಾನ್ ನಡೆಯುತ್ತಿದೆ ಎನ್ನಲಾಗಿದೆ.

ಅಂದಹಾಗೇ ರಾಜ್ಯಾಧ್ಯಂತ 14 ಲಕ್ಷಕ್ಕೂ ಹೆಚ್ಚು ಅಕ್ರಮ ಬಿಪಿಎಲ್ ಕಾರ್ಡ್ ಇದ್ದಾವೆ ಎನ್ನಲಾಗುತ್ತಿದೆ. ಅವುಗಳನ್ನು ಪತ್ತೆ ಪತ್ತೆ ಹಚ್ಚಿ, ಮೊದಲ ಹಂತದಲ್ಲೇ 6 ತಿಂಗಳು ಕಾರ್ಡ್ ಅಮಾನತುಗೊಳಿಸಲಿದೆಯಂತೆ. ಅಕ್ರಮ ಕಾರ್ಡ್ ಪತ್ತೆ ಹಚ್ಚಲು ಆಹಾರ ಇಲಾಖೆ ಅಲ್ಲದೇ ಇತರೇ ಇಲಾಖೆಯ ಸಹಕಾರವನ್ನು ಪಡೆಯಲಿದೆಯಂತೆ.

ಈ ಎಲ್ಲಾ ಕಾರಣದಿಂದಾಗಿ ಯಾರೆಲ್ಲ ಕುಟುಂಬದ ವಾರ್ಷಿಕ 1.20 ಲಕ್ಷ ಮೀರಿದ್ದಾರೋ ಅವರೆಲ್ಲ ಕಾರ್ಡ್ ರದ್ದಾಗಲಿದೆ. ಅಲ್ಲದೇ ಆದಾಯ ತೆರಿಗೆ ಪಾವತಿ ಮಾಡೋರು, ನಿಗದಿಗಿಂತ ಹೆಚ್ಚು ಜಮೀನು ಹೊಂದಿರೋರು, ನಗರದಲ್ಲಿ 1000 ಚದರಡಿ ಮನೆ ಇರೋರು, ವೈಟ್ ಬೋರ್ಡ್ 4 ಚಕ್ರದ ವಾಹನ ಇರೋರ ಬಿಪಿಎಲ್ ಕಾರ್ಡ್ ರದ್ದಾಗಲಿದೆ.

LEAVE A REPLY

Please enter your comment!
Please enter your name here