Home ದಕ್ಷಿಣ ಕನ್ನಡ ಶಾಲಾ ಆವರಣ ಮತ್ತು ಮೈದಾನವನ್ನು ಯಾವುದೇ ಶೈಕ್ಷಣಿಕೇತರ ಚಟುವಟಿಕೆಗಳಿಗೆ ಬಳಸಬಾರದು ಎಂಬ ಸರ್ಕಾರದ ಸುತ್ತೋಲೆ ಹಿಂದೂ...

ಶಾಲಾ ಆವರಣ ಮತ್ತು ಮೈದಾನವನ್ನು ಯಾವುದೇ ಶೈಕ್ಷಣಿಕೇತರ ಚಟುವಟಿಕೆಗಳಿಗೆ ಬಳಸಬಾರದು ಎಂಬ ಸರ್ಕಾರದ ಸುತ್ತೋಲೆ ಹಿಂದೂ ವಿರೋಧಿ ನೀತಿಯ ಮುಂದುವರಿದ ಭಾಗ: ಕ್ಯಾಪ್ಟನ್ ಬ್ರಿಜೇಶ್ ಚೌಟ

0
ಮಂಗಳೂರು: ಈಗಾಗಲೇ ಆಷಾಢ ಕಳೆಯುತ್ತಿದ್ದಂತೆ ಕರಾವಳಿಯಲ್ಲಿ ಕೃಷ್ಣ ಜನ್ಮಾಷ್ಟಮಿ ,ಗಣೇಶೋತ್ಸವ, ಶಾರದೋತ್ಸವ ಹೀಗೆ ಹಲವು ಹಬ್ಬ ಹರಿದಿನಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ,  ಶಾಲಾ ಆವರಣ ಮತ್ತು ಮೈದಾನವನ್ನು ಯಾವುದೇ “ಶೈಕ್ಷಣಿಕೇತರ” ಚಟುವಟಿಕೆಗಳಿಗೆ ಬಳಸುವುದನ್ನು ನಿಷೇಧಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ನಿರ್ದೇಶಕರ ಕ್ರಮ ಖಂಡನೀಯ.
ಇದು ಹಿಂದೂ ಆಚರಣೆಗಳಿಗೆ ತೊಡಕನ್ನು ಉಂಟು ಮಾಡಿ ನಮ್ಮ ಸಂಸ್ಕೃತಿಯನ್ನು ಅಳಿಸುವ ವ್ಯವಸ್ಥಿತ ಹುನ್ನಾರ ಹಾಗೂ ಕಾಂಗ್ರೆಸ್ ಪಾರ್ಟಿ ಮತ್ತು ಸಿದ್ಧರಾಮಯ್ಯ ಸರಕಾರದ ಹಿಂದೂ ವಿರೋಧಿ ನೀತಿಯ ಮುಂದುವರಿದ ಭಾಗ ಇದಾಗಿದೆ.
ಹಿಂದುತ್ವದ ಭದ್ರಕೋಟೆಯಲ್ಲಿ ನಿಮ್ಮ ಹಿಂದೂ ವಿರೋಧಿ ಪ್ರಯೋಗಗಳನ್ನು ನಾವು ಎಂದಿಗೂ ಸಹಿಸಲ್ಲ.
ಈ ಆದೇಶವನ್ನು ಕೂಡಲೇ ಹಿಂಪಡೆಯಿರಿ ಅಥವಾ ಪ್ರತಿಭಟನೆ ಎದುರಿಸಲು ಸಿದ್ಧರಾಗಿ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ಸಿದ್ದು ಸರಕಾರದ ವಿರುದ್ಧ ಗುಡುಗಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಈಗಾಗಲೆ ಹಲವು ಹಗರಣಗಳಲ್ಲಿ ಸಿಕ್ಕಿಹಾಕಿಕೊಂಡಿದ್ದು  ಹೊರಬರಲಾಗದೇ ಹೆಣಗಾಡುತ್ತಿದೆ, ಸರ್ಕಾರದ ವಿರುದ್ಧ ರಾಜ್ಯಾದ್ಯಂತ  ಬಿಜೆಪಿ ಪಕ್ಷವು ನಡೆಸುತ್ತಿರುವ ಪ್ರತಿಭಟನೆಯ ದಿಕ್ಕು ತಪ್ಪಿಸಲು ಇಂತಹ ಸಣ್ಣತನ ಪ್ರದರ್ಶಿಸುತ್ತಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here