ಉಡುಪಿ : ಕಳೆದ ಒಂದೂವರೆ ತಿಂಗಳಿನಿಂದ ಆಳ ಸಮುದ್ರ ಮೀನುಗಾರಿಕೆಗೆ ನಿಷೇಧ ಇರುವುದರಿಂದ ಮಲ್ಪೆ ಬಂದರಿನಲ್ಲಿ ದೋಣಿಗಳ ನಿಲುಗಡೆಗೆ ಅವಕಾಶ ನೀಡಲಾಗಿದೆ. ಕೋಟ್ಯಂತರ ಮೌಲ್ಯದ ಸಾವಿರಾರು ಬೋಟುಗಳನ್ನು ಬಂದರಿನಲ್ಲಿ ಲಂಗರು ಹಾಕಲಾಗಿದೆ. ಮಲ್ಪೆ ಬಂದರಿನಲ್ಲಿ ದಿನದಿಂದ ದಿನಕ್ಕೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಲೇ ಇದೆ. ಕಳ್ಳರು ಬೋಟ್ ನ ಪ್ಯಾನ್ ನ ರೆಕ್ಕೆ ಮುರಿದ ಘಟನೆ ಬಾಪೂತೋಟದಲ್ಲಿ ನಡೆದಿದೆ. ಬಂದರಿಗೆ ಯಾರಿಗೂ ಪ್ರವೇಶವಿಲ್ಲ ಎಂದು ಹೇಳಿ ಬಂದರಿನ ಗೇಟಿಗೆ ಬೀಗ ಹಾಕಿರುವುದು ಬಿಟ್ಟರೇ ಕಳ್ಳರು ಯಾವುದೇ ಭಯವಿಲ್ಲದೆ ಬಂದರಿನ ಒಳ ಪ್ರವೇಶಿಸುತ್ತಿದ್ದಾರೆ. ಈಗಾಗಲೇ ಅದೆಷ್ಟೋ ಬೋಟ್ಗಳ ಬ್ಯಾಟರಿಗಳ, ಪ್ಯಾನ್ ಗಳ ಕಳ್ಳತನ ನಡೆದಿದೆ.
ಇಲ್ಲಿ ನಿಲ್ಲಿಸಲಾದ ಬೋಟ್ ಗಳಿಗೆ ಯಾವುದೇ ಭದ್ರತೆ ಇಲ್ಲ ಪೊಲೀಸ್ ಇಲಾಖೆ ರಾತ್ರಿ ವೇಳೆ ಗಸ್ತು ಬರದೇ ಇರುವುದು ಈ ಕಳ್ಳರಿಗೆ ಕಳ್ಳತನ ಗೈಯ್ಯಲು ಮತ್ತಷ್ಟು ಸುಲಭ ದಾರಿ ಮಾಡಿಕೊಟ್ಟಿದೆ.
ಸಂಬಂಧಪಟ್ಟವರು ಕೂಡಲೇ ಬೋಟ್ ಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು. ಮಲ್ಪೆ ಬಂದರಿಗೆ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.