Home ಕರಾವಳಿ ಭಾರತ್ ಒನ್ ಪ್ರಸ್ತುತಪಡಿಸುವ ಮಂಗಳೂರು ಎಕ್ಸ್ ಪ್ರೆಸ್ ಚಾನಲ್ ಪೇಜಾವರ ಶ್ರೀಗಳಿಂದ ಲೋಕಾರ್ಪಣೆ

ಭಾರತ್ ಒನ್ ಪ್ರಸ್ತುತಪಡಿಸುವ ಮಂಗಳೂರು ಎಕ್ಸ್ ಪ್ರೆಸ್ ಚಾನಲ್ ಪೇಜಾವರ ಶ್ರೀಗಳಿಂದ ಲೋಕಾರ್ಪಣೆ

0

ಮಂಗಳೂರು: ಭಾರತ್ ಒನ್ ಗ್ರೂಪ್ ಪ್ರಸ್ತುತಪಡಿಸುವ ಮಂಗಳೂರು ಎಕ್ಸ್ ಪ್ರೆಸ್ ಚಾನಲ್ ಜುಲೈ 7 ರಂದು ಭಾನುವಾರ ನಗರದ ಸಂಘನಿಕೇತನದಲ್ಲಿ ಉಡುಪಿ ಪೇಜಾವರ ಅಧೋಕ್ಷಜ ಮಠ ಸ್ವಾಮೀಜಿಗಳಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥರ ದಿವ್ಯ ಸಾನಿಧ್ಯದಲ್ಲಿ ಲೋಕಾರ್ಪಣೆಗೊಂಡಿತು.


ಮಂಗಳೂರು ಎಕ್ಸ್ ಪ್ರೆಸ್ ವೆಬ್ಸೈಟ್ ಅನಾವರಣವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಾನ್ಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ನಡೆಸಿಕೊಟ್ಟರು,ಹಾಗೆ ಯೂಟ್ಯೂಬ್ ಚಾನೆಲ್ ಅನಾವರಣವನ್ನು ಮಂಗಳೂರು ದಕ್ಷಿಣದ ಮಾನ್ಯ ಶಾಸಕರಾದ ಡಿ ವೇದವ್ಯಾಸ ಕಾಮತ್ ನಡೆಸಿದರು, ಮಂಗಳೂರು ಎಕ್ಸ್ಪ್ರೆಸ್ ನ ಫೇಸ್ಬುಕ್ ಖಾತೆ ಅನಾವರಣವನ್ನು ಅಸ್ತ್ರ ಗ್ರೂಪ್ ನ ಮಾಲಕರಾದ ಲಂಚು ಲಾಲ್ ಕೆ.ಎಎಸ್ ನಡೆಸಿಕೊಟ್ಟರು, ಥ್ರೆಡ್ಸ್ ಖಾತೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಅನಾವರಣಗೊಳಿಸಿದರು.

ಮಂಗಳೂರು ಎಕ್ಸ್ಪ್ರೆಸ್ ನ ಮೊದಲ ನ್ಯೂಸ್ ಗೆ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್ ಇವರು ಚಾಲನೆ ನೀಡಿದರು.

ಚಾನಲ್ನ ಎಕ್ಸ್ (ಟ್ವಿಟ್ಟರ್) ಖಾತೆ ಅನಾವರಣವನ್ನು ಡಾ. ಎಚ್ಎಸ್ ಶೆಟ್ಟಿ D.Sc ಅಧ್ಯಕ್ಷರು ಹೆಗ್ಗುಂಜೇ ರಾಜೀವಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ)ಬೆಂಗಳೂರು ಇವರು ನಡೆಸಿಕೊಟ್ಟರು ,ಭಾರತ್ ಒನ್ ಶೋ ರೀಲ್ ಅನಾವರಣವನ್ನು HEF ಮಂಗಳೂರು ಚಾಪ್ಟರ್ ನ ಅಧ್ಯಕ್ಷರಾದ ಶ್ರೀ ನಿಶಾಂತ್ ಶೆಟ್ ಇವರು ನಡೆಸಿಕೊಟ್ಟರು, ಈಗಾಗಲೇ ಒಂದು ವರ್ಷ ಪೂರೈಸಿರುವ ಪ್ರಖರ ನ್ಯೂಸ್ ನ ಹೊಸರೂಪದ ವೆಬ್ಸೈಟ್ ಅನಾವರಣವನ್ನು ಮಂಗಳೂರು ಪ್ರೆಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀ ಪಿ ಬಿ ಹರೀಶ್ ರೈ ಇವರು ನಡೆಸಿದರು.
ಇನ್ನುಳಿದಂತೆ ಅತಿಥಿಗಳಾಗಿ ಕರ್ನಾಟಕ ಸರಕಾರದ ಮಾಜಿ ಸಚಿವರಾದ ನಾಗರಾಜ್ ಶೆಟ್ಟಿ, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಶ್ರೀ ರವಿಶಂಕರ್ ಗುರೂಜಿ ಅವರ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಸುರೇಶ್ ಭಾಗವಹಿಸಿದ್ದರು. ಮಂಗಳೂರು ಎಕ್ಸ್ಪ್ರೆಸ್ ನ ಮುಖ್ಯಸ್ಥರಾದ ಶಿವಪ್ರಸಾದ್ ಕೊಕ್ಕಡ ಸ್ವಾಗತ ಮಾಡಿದರು.


ಭಾರತ್ ಒನ್ ಗ್ರೂಪ್ ನ ಎಂ. ಡಿ ಹಾಗೂ ಸಿ. ಇ. ಒ ಶಿವಪ್ರಸಾದ್ ಅವರು ಪ್ರಾಸ್ತಾವಿಕ ಭಾಷಣ ಮಾಡಿ ತಮ್ಮ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು.
ಮಂಗಳೂರು ಎಕ್ಸ್ಪ್ರೆಸ್‌ನ ಮುಂದಿನ ಕಾರ್ಯಕ್ರಮಗಳಾದ ಇನ್ ಸೈಡ್ ಸ್ಟೋರಿ with ಶಿವಪ್ರಸಾದ್ ಕೊಕ್ಕಡ, ಪಬ್ಲಿಕ್ ಎಕ್ಸ್ಪ್ರೆಸ್ with ಪ್ರಜ್ವಲ್ ಬಲ್ಯಾಯ, ಕನಸು- ನನಸು with ಸೌಮ್ಯ ಸುಧೀಂದ್ರ ರಾವ್, ಮಾತು- ಮಂಥನ with ಪ್ರಜ್ವಲ್ ಅತ್ತಾವರ,ಪುಟಾಣಿ ಎಕ್ಸ್ಪ್ರೆಸ್ ಈ ಕಾರ್ಯಕ್ರಮಗಳ ಪ್ರೊಮೋಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಪ್ರಜ್ವಲ್ ಅತ್ತಾವರ ಅತಿಥಿಗಳಿಗೆ ಧನ್ಯವಾದಗಳು ಸಮರ್ಪಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಆಕಾಶವಾಣಿ ಕಲಾವಿದರಾದ ಶ್ರೀಮತಿ ವಿದ್ಯಾರವರು ನಿರ್ವಹಿಸಿದರು.

LEAVE A REPLY

Please enter your comment!
Please enter your name here