ಮಂಗಳೂರು: ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು ಪೂರ್ವ ಮಧ್ಯ ರೈಲ್ವೇ ಪಾಟ್ನಾ ಜಂಕ್ಷನ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಬೇಸಗೆ ವಿಶೇಷ ರೈಲನ್ನು ಓಡಿಸಲು ನಿರ್ಧರಿಸಿದೆ. ನಂ. 03243 ಪಾಟ್ನಾ ಜಂಕ್ಷನ್ – ಮಂಗಳೂರು ಸೆಂಟ್ರಲ್ ವಿಶೇಷ ರೈಲು ಜೂ. 15, 22 ಮತ್ತು 29ರಂದು (ಪ್ರತೀ ಶನಿವಾರ) ವಾರ) ರಾತ್ರಿ 10.30ಕ್ಕೆ ಪಾಟ್ನಾ ಜಂಕ್ಷನ್ನಿಂದ ಹೊರಡ ಲಿದ್ದು 4ನೇದಿನಬೆಳಗ್ಗೆ7 ಕ್ಕೆಮಂಗಳೂರು ಸೆಂಟ್ರಲ್ ತಲುಪಲಿದೆ. ನಂ. 03244 ಮಂಗಳೂರು ಸೆಂಟ್ರಲ್- ಪಾಟ್ನಾ ಜಂಕ್ಷನ್ ವಿಶೇಷ ರೈಲು ಜೂ.18, 25, ಮತ್ತು ಜುಲೈ 2ರಂದು ಪ್ರತಿ ಗುರುವಾರ ರಾತ್ರಿ 10ಕ್ಕೆಮಂಗಳೂರುಸೆಂಟ್ರಲ್ನಿಂದ ಹೊರಡ ಲಿದ್ದು, 4ನೇ ದಿನ ಬೆಳಗ್ಗೆ 5.30ಕ್ಕೆ ಪಾಟ್ನಾ ತಲುಪಲಿದೆ. ರೈಲು 1- ಎಸಿ ಫಸ್ಟ್ ಕ್ಲಾಸ್ ಕೋಚ್, 2- ಎಸಿ ಟು ed ಟೈಯರ್ ಕೋಚ್, 4- ಎಸಿ ತ್ರಿ ಟೈಯರ್ ಕೋಚ್, 3- ಎಸಿ ತ್ರಿ ಟೈಯರ್ ಎಕಾನಮಿ ಕೋಚ್, 6 ಸ್ಟೀಪರ್ ಕ್ಲಾಸ್ ಕೋಚ್, 3 ಸಾಮಾನ್ಯ ಸೆಕೆಂಡ್ ಕ್ಲಾಸ್ ಕೋಚ್, 1-ಸೆಕೆಂಡ್ ಕ್ಲಾಸ್ ಕೋಚ್ ಮತ್ತು 1-ಲಗೇಜ್ ಕಮ್ ಬ್ರೇಕ್ ವ್ಯಾನ್ ಇರಲಿದೆ ಎಂದು ಪಾಲಕ್ಕಾಡ್ ವಿಭಾಗದ ಪ್ರಕಟನೆ ತಿಳಿಸಿದೆ.