Home ಕರಾವಳಿ ಬೆಳ್ತಂಗಡಿ : ಪ್ರವಾಸಿ ಬಸ್‌ ಅಪಘಾತ : 19 ಮಂದಿಗೆ ಗಾಯ

ಬೆಳ್ತಂಗಡಿ : ಪ್ರವಾಸಿ ಬಸ್‌ ಅಪಘಾತ : 19 ಮಂದಿಗೆ ಗಾಯ

0

ಬೆಳ್ತಂಗಡಿ : ಪ್ರವಾಸಿ ಬಸ್ಸೊಂದು ಚಾಲಕ ಅಜಾಗರೂಕ ಚಾಲನೆಯಿಂದ ರಸ್ತೆಯ ಬಲಬದಿಯ ಧರೆಗೆ, ಮರಕ್ಕೆ ಮತ್ತು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲದ್ದವರೆಲ್ಲರೂ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದಮುಂಡಾಜೆ ಶೀಟ್ ಎಂಬಲ್ಲಿ ನಡೆದಿದೆ.

ಬೆಂಗಳೂರು ನಿವಾಸಿ ಯಲ್ಲಪ್ಪರವರು ದಿನಾಂಕ:09/05/2024 ರಂದು ತನ್ನ ಮನೆಯವರ ಜೊತೆಯಲ್ಲಿ KA51AA6033 ನೇ ಬಸ್‌ ನಲ್ಲಿ ಬೆಂಗಳೂರಿನಿಂದ ಹೊರಟು ಮುರುಡೇಶ್ವರ, ಶೃಂಗೇರಿ, ಎಡಗುಂಜಿ, ಹೊರನಾಡು, ಕಡೆಗಳಲ್ಲಿ ದೇವರ ದರ್ಶನ ಮಾಡಿ ಬಳಿಕ ದಿನಾಂಕ:12/05/2024 ಧರ್ಮಸ್ಥಳ ದೇವಸ್ಥಾನಕ್ಕೆ ಹೊರಟು ಚಾರ್ಮಾಡಿ ಕಡೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಾ ಸಮಯ ಸುಮಾರು ರಾತ್ರಿ 9:45 ಗಂಟೆಗೆ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಮುಂಡಾಜೆ ಶೀಟ್‌ ಬಳಿ ತಲುಪುತ್ತಿದ್ದಂತೆ ಬಸ್‌ನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿ ರಸ್ತೆಯ ಬಲಬದಿಯ ಧರೆಗೆ, ಮರಕ್ಕೆ ಮತ್ತು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್‌ ಚಾಲಕ ರಾಕೇಶ್‌ ಮತ್ತು ಕ್ಲೀನರ್‌ ಮನೋಜ್‌ ಸಹಿತ ಯಲ್ಲಪ್ಪ, ತನುಶ್ರಿ,.ಮಿಥುನ್‌,ರೂಪ,ಯಲ್ಲಮ್ಮ,.ಪವನ್,.ವೆಂಕಟಸ್ವಾಮಪ್ಪ,ಯಶವಂತ್,ರತ್ನಮ್ಮ,ಮಂಜುಳ,.ವಿಕಾಸ್,ಹಂಸ,ಕೀರ್ತನ,.ಅಖಿಲ,ಮನೋಜ,ರೂಪ ಟಿ ಅರ್,ಪ್ರೀತಮ್,ರಾಕೇಶ್,ತನಿಷ್ಕ ಗಾಯಗೊಂಡಿದ್ದಾರೆ.ಗಾಯಾಳುಗಳನ್ನು ಉಜಿರೆ ಎಸ್‌ಡಿಎಮ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು,, ಈ ಪೈಕಿ ವೆಂಕಟಸ್ವಮಪ್ಪ, ರಾಕೇಶ್‌ ಮತ್ತು ಮನೋಜ್‌ ರವರುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಘಟನೆ ಬಗ್ಗೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ ಅ.ಕ್ರ: 60/2024 ಕಲಂ: 279 ,337 ಭಾ ದಂ ಸಂ ನಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here