ಮಂಗಳೂರು: ಸ್ಕೂಟರ್ ಸ್ಕಿಡ್ಡಾಗಿ ರಸ್ತೆಗೆ ಬಿದ್ದ ವೇಳೆ ಸ್ಕೂಟರ್ ಸವಾರರ ಮೇಲೆ ಟಿಪ್ಪರ್ ಹರಿದ ಪರಿಣಾಮ ಓರ್ವ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡ ಘಟನೆ ರಾ.ಹೆ.75ರ ಪಡೀಲ್ ಸಮೀಪದ ನಾಗುರಿ-ಅಳಪೆಯ ಮಧ್ಯೆ ನಡೆದಿದೆ.
ಮೃತರನ್ನು ಎಕ್ಕೂರು ನಿವಾಸಿ ಹರ್ಷನ್(17) ಎಂದು ಗುರುತಿಸಲಾಗಿದ್ದು ಗಂಭೀರ ಗಾಯಗೊಂಡ ಕೀರ್ತನ್(17) ಮತ್ತು ಕಿಶೋರ್(18) ಆಸ್ಪತ್ರೆಗೆ ದಾಖಲಿಸಲಾಗಿದೆ. ಪಡೀಲ್ನಿಂದ ಪಂಪ್ವೆಲ್ಗೆ ತೆರಳುತ್ತಿದ್ದ ಸ್ಕೂಟರ್ ನಾಗುರಿ-ಅಳಪೆಯ ರಸ್ತೆ ಮಧ್ಯೆ ಸಿಡ್ಡಾಗಿ ಹೆದ್ದಾರಿಗೆ ಮಗುಚಿ ಬಿದ್ದಿದೆ. ಈ ವೇಳೆ ಸ್ಕೂಟರ್ನಲ್ಲಿದ್ದ ಮೂವರೂ ರಸ್ತೆಗೆ ಎಸೆಯಲ್ಪಟ್ಟರು.
ಅದೇ ರಸ್ತೆಯಲ್ಲಿ ಅಮಿತ ವೇಗದಲ್ಲಿ ಚಲಿಸುತ್ತಿದ್ದ ಟಿಪ್ಪರ್ ಹರ್ಷನ್ ಮೇಲೆ ಹರಿದಿದ್ದು, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ನಗರದ ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.