ಪುತ್ತೂರು: ಪ್ರತಿಬಾರಿ ವಿಶಿಷ್ಟ ಮತ್ತು ವಿನೂತನ ವಿಷಯಗಳೊಂದಿಗೆ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ನಡೆಸಿ ಮೆಚ್ಚುಗೆಗೆ ಪಾತ್ರವಾಗಿರುವ ಪುತ್ತೂರಿನ IRCMD ಶಿಕ್ಷಣ ಸಂಸ್ಥೆಯಲ್ಲಿ ದಿನಾಂಕ 22-04-2024 ರಿಂದ 29-04-2024 ರವರೆಗೆ ಹ್ಯಾಪಿ ಡೇಸ್ ಕಿಡ್ಸ್ ಸಮ್ಮರ್ ಕೂಲ್ ಕ್ಯಾಂಪ್ ನಡೆಯಲಿದೆ (ಹವಾನಿಯಂತ್ರಿತ ಕೊಠಡಿ).
IRCMD Kids Camp Includes : ಮಕ್ಕಳಿಗಾಗಿ ಚೆಸ್, ಮಕ್ಕಳಿಗಾಗಿ ಕೋಡಿಂಗ್ ಮತ್ತು ತಂತ್ರಜ್ಞಾನ, ವಿಜ್ಞಾನ ಪ್ರಯೋಗಗಳು, ಲ್ಯಾಂಗ್ವೇಜ್ ಲರ್ನಿಂಗ್, ಸುಲಭ ಗಣಿತ, ಯೋಗ ಮತ್ತು ಧ್ಯಾನ ಕ್ಯಾಲಿಗ್ರಫಿ ಬರವಣಿಗೆ, DIY ಕ್ರಾಫ್ಟ್ ಪ್ರಾಜೆಕ್ಟ್ ಮತ್ತು ಪರಿಸರ ಸಂರಕ್ಷಣಾ ಚಟುವಟಿಕೆಗಳು ಇತ್ಯಾದಿ ಇಂದೇ ನೋಂದಾಯಿಸಿ.
IRCMD Happy Days ಕಿಡ್ಸ್ ಕ್ಯಾಂಪ್ ವಿಶೇಷತೆ:-ತಾನು ನಡೆಸುವ ಪ್ರತಿ ಕ್ಯಾಂಪ್ ನಲ್ಲೂ ವಿಶಿಷ್ಟ ರೀತಿಯ ಚಟುವಟಿಕೆಗಳನ್ನು ಮಕ್ಕಳಿಗಾಗಿ ಅತ್ಯಂತ ಅಚ್ಚುಕಟ್ಟಾಗಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ನಡೆಸುವ ಶಿಕ್ಷಣ ಸಂಸ್ಥೆ ಇದಾಗಿದ್ದು, ಅತ್ಯಂತ ಕಡಿಮೆ ಸಮಯದಲ್ಲಿ ಮಕ್ಕಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ವಿನೂತನ ರೀತಿಯಲ್ಲಿ ಮಕ್ಕಳ ಆಸಕ್ತಿಯನ್ನು ಕೇಂದ್ರಿಕರಿಸಿ ನಡೆಸುವ ಒಂದು ಉತ್ತಮ ಶಿಬಿರವೇ “IRCMD Happy Days ಕಿಡ್ಸ್ ಕ್ಯಾಂಪ್”.
IRCMD ಕಿಡ್ಸ್ ಕ್ಯಾಂಪ್ ನಲ್ಲಿ ಏನೇನಿದೆ?i) ಕೋಡಿಂಗ್ ಮತ್ತು ತಂತ್ರಜ್ಞಾನ : ಪ್ರಪಂಚವು 21ನೇ ಶತಮಾನದಲ್ಲಿ ಮುಂದುವರೆದಂತೆ ಪ್ರೋಗ್ರಾಮಿಂಗ್ ನಮ್ಮೆಲ್ಲರ ಜೀವನದ ನಿರ್ಣಾಯಕ ಪದರವಾಗಿದೆ. ಕೋಡಿಂಗ್ ಚಟುವಟಿಕೆಗಳನ್ನು ಅನುಸರಿಸುವ ಮೂಲಕ ಮಕ್ಕಳು ತಮ್ಮ ಶಾಲಾ ಶಿಕ್ಷಣದ ಜೊತೆಗೆ ಪ್ರೋಗ್ರಾಮಿಂಗ್ ಪರಿಕಲ್ಪನೆಗಳನ್ನು ತಿಳಿದುಕೊಳ್ಳುತ್ತಾರೆ. 5 ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳಿಗೂ ಕೋಡಿಂಗ್ ಉಪಯುಕ್ತವಾಗಿದೆ.ii) ಚೆಸ್: ಚೆಸ್ ಬಾಲ್ಯದಲ್ಲಿ ಬೆಳೆಯುತ್ತಿರುವ ಮಕ್ಕಳ ಮೆದುಳಿಗೆ ತರಬೇತಿ ನೀಡುತ್ತದೆ. ಇದು ಕೇವಲ ಆಟವಾಗಿರದೆ ಇದನ್ನು ಮಾನಸಿಕ ವ್ಯಾಯಾಮ ಎಂದು ವರ್ಣಿಸಬಹುದು. ಮಗುವಿನ ಸ್ಮರಣ ಶಕ್ತಿ ಮತ್ತು ಏಕಾಗ್ರತೆಯ ಶಕ್ತಿಯನ್ನು ಸುಧಾರಿಸುವ ಅಬಾಕಸ್ ನ ನಂತರದ ಸ್ಥಾನವು ಚೆಸ್ ಗಿದೆ.iii) ವಿಜ್ಞಾನ ಪ್ರಯೋಗಗಳು: ವಿಜ್ಞಾನ ಜಗತ್ತಿನ ಕಡೆ ಮಕ್ಕಳನ್ನು ಆಕರ್ಷಿಸುವುದು ಮತ್ತು ಮಕ್ಕಳನ್ನು ಪ್ರಶ್ನೆ ಮಾಡುವಂತೆ ಮಾಡುವುದಕ್ಕೆ ಆದ್ಯತೆ ನೀಡಲಾಗುತ್ತದೆ.iv) ಸುಲಭ ಗಣಿತ: ಗಣಿತವೆಂದರೆ ಸಾಕು ಬಹುತೇಕ ವಿದ್ಯಾರ್ಥಿಗಳಲ್ಲಿ ನಡುಕ. ಆದರೆ ಗಣಿತ ಕಬ್ಬಿಣದ ಕಡಲೆಯಲ್ಲ. ಅದನ್ನು ಒಲಿಸಿಕೊಳ್ಳುವ ಸುಲಭ ಮಾರ್ಗವೇ ವೇದ ಗಣಿತ. ಮಕ್ಕಳಿಗಾಗಿ ಮೋಜಿನ ಮೂಲಕ ಗಣಿತ ಕಲಿಕೆ.v) ಯೋಗ ಮತ್ತು ಧ್ಯಾನ : ಅಗ್ನಿಹೋತ್ರದ ವಾತಾವರಣದಿಂದ ಮಕ್ಕಳ ಮೇಲೆ ಒಳ್ಳೆಯ ಪರಿಣಾಮಗಳಾಗುತ್ತವೆ. ಸಿಡಿಮಿಡಿಗೊಳ್ಳುವ ಮತ್ತು ಹಠ ಮಾಡುವ ಮಕ್ಕಳು ಶಾಂತ ಮತ್ತು ಬುದ್ಧಿವಂತರಾಗುತ್ತಾರೆ. ಅಧ್ಯಯನದಲ್ಲಿ ಮಕ್ಕಳಿಗೆ ಏಕಾಗ್ರತೆ ಬರುತ್ತದೆ.vi) ಪರಿಸರ ಶಿಕ್ಷಣ: ಪರಿಸರ ಶಿಕ್ಷಣವು ಎಷ್ಟು ನಿರ್ಣಾಯಕವಾಗಿದೆಯೆಂದರೆ ಭವಿಷ್ಯದ ಪೀಳಿಗೆಯನ್ನು ಉಳಿಸಲು ಅರ್ಥಪೂರ್ಣವಾದ ಬದಲಾವಣೆಗಳನ್ನು ರಚಿಸಲು ಮಕ್ಕಳಿಗೆ ಅಧಿಕಾರ ನೀಡಬೇಕು. ಚಿಕ್ಕ ವಯಸ್ಸಿನಲ್ಲೇ ಪರಿಸರದ ಪರಿಣಾಮಗಳ ಬಗ್ಗೆ ಅವರು ಕಲಿತಾಗ ಭವಿಷ್ಯದ ಕುರಿತು ಕನಸನ್ನು ಕಾಣಲು ಪ್ರಾರಂಭಿಸುತ್ತಾರೆ.vii) ಲ್ಯಾಂಗ್ವೇಜ್ ಲೆರ್ನಿಂಗ್ : ಆಟದ ಮೂಲಕ ಮತ್ತು ಯಾವುದೇ ಒತ್ತಡವಿಲ್ಲದೆ ಭಾಷೆಗಳನ್ನು ಸ್ವಾಭಾವಿಕವಾಗಿ ಮತ್ತು ತ್ವರಿತವಾಗಿ ತಿಳಿದುಕೊಳ್ಳಲು ಮಕ್ಕಳನ್ನು ಪ್ರೇರೇಪಿಸಲಾಗುವುದು. ಸಣ್ಣ ಗುಂಪುಗಳಲ್ಲಿ ನಡೆಯುವ ಈ ಭಾಷಾ ಕಲಿಕೆಯು ಮೋಜಿನ ಆಟಗಳ ಜೊತೆಗೆ ಆಕರ್ಷಕ ಹಾಡುಗಳು ಮತ್ತು ಪ್ರಾಸ ಹಾಗು ಮಕ್ಕಳ ಸ್ನೇಹಿ ಶಬ್ದಕೋಶ ಒಳಗೊಂಡಿರುತ್ತದೆ.viii) DIY ಆರ್ಟ್ ಕ್ರಾಫ್ಟ್ : ಕಲೆ ಮತ್ತು ಕರಕುಶಲ ಯೋಜನೆಗಳು, ಮಕ್ಕಳು ತಮ್ಮ ಕೈ ಮತ್ತು ಬೆರಳುಗಳಲ್ಲಿ ಸಣ್ಣ ಸ್ನಾಯುಗಳನ್ನು ಬಳಸುವ ಮೂಲಕ ತಮ್ಮ ಉತ್ತಮ ಮೋಟಾರು ಕೌಶಲ್ಯಗಳನ್ನು ಅಭಿವುದ್ಧಿ ಪಡಿಸಲು ಸಹಾಯ ಮಾಡುತ್ತದೆ. ಮಕ್ಕಳ ಚಿಂತನೆ, ಭಾವನೆ, ನಂಬಿಕೆ ಅಥವಾ ಕಲ್ಪನೆಗಳನ್ನು ಸಂವೇದನಾ ಶಕ್ತಿ (Sense) ಮೂಲಕ ಉತ್ತೇಜಿಸುವುದು, ಮನೋಲ್ಲಾಸವನ್ನು ಉಂಟುಮಾಡುವ ಏಕೈಕ ಭಾವನೆಯೇ ಕಲೆ ಮತ್ತು ಕರಕುಶಲ ಸೃಷ್ಟಿ.ix) ಕ್ಯಾಲಿಗ್ರಫಿ ಬರವಣಿಗೆ: ಅಕ್ಷರ ವಿನ್ಯಾಸ, ಕೈ ಬರಹದ ಸುಂದರ ಶೈಲಿ.x) ಟೀಮ್ ಗೇಮ್: ಮಕ್ಕಳಲ್ಲಿ ಆತ್ಮವಿಶ್ವಾಸ, ಇಚ್ಛಾಶಕ್ತಿ, ಗೌರವ, ಸಾಮಾಜಿಕ ಕೌಶಲ್ಯ, ಬಲವಾದ ಸಂಬಂಧ, ಪರಿಶ್ರಮ ಇತ್ಯಾದಿ ಅಭಿವೃದ್ಧಿ ಪಡಿಸುವಿಕೆ.ಮತ್ತು ಇತರೆ ಚಟುವಟಿಕೆಗಳು.
ಕಿಡ್ಸ್ ಕ್ಯಾಂಪ್ ಯಾತಕ್ಕಾಗಿ:-ಬೇರೆ ಬೇರೆ ಕಡೆಗಳಿಂದ ಬಂದ ಹೊಸ ಮುಖಗಳ ಪರಿಚಯ ನಿಮ್ಮ ಮಕ್ಕಳಿಗಾಗುತ್ತದೆ. ಪ್ರತಿ ದಿನ ಅದೇ ಶಾಲೆ ಅದೇ ಸ್ನೇಹಿತರನ್ನು ಹೊಂದಿದ್ದ ಮಗುವುಗೆ ಇಲ್ಲಿ ಹೊಸ ಸ್ನೇಹಿತರು ದೊರಕುತ್ತಾರೆ. ಹೊಸ ವಿಚಾರಗಳು ತಿಳಿಯುತ್ತವೆ. ಯಾರೊಂದಿಗೂ ಮಾತನಾಡದೇ ತಮ್ಮ ಪಾಡಿಗೆ ತಾನಾಗೇ ಇರುವ ಮಕ್ಕಳೂ ಕೂಡ, ಶಿಬಿರಗಳಲ್ಲಿ ತಮ್ಮ ಚಿಪ್ಪಿನಿಂದ ಹೊರಬಂದು ಸಮಾಜದಲ್ಲಿ ಎಲ್ಲರೊಂದಿಗೆ ಹೇಗೆ ಬದುಕಬೇಕು ಎನ್ನುವ ಕಲೆಯನ್ನು ಕಲಿಯುತ್ತಾರೆ. ಭಾಷಾ ಬೆಳವಣಿಗೆ ಮಾಡುವುದರಲ್ಲಿ, ಧೈರ್ಯ ಹೆಚ್ಚಿಸುವಿಕೆಯಲ್ಲಿ ,ಎಲ್ಲರ ಜೊತೆ ಪಾಳ್ಗೊಳ್ಳುವಿಕೆಯಲ್ಲಿ, ಕರ್ತವ್ಯ ಪ್ರಜ್ಞೆ ಮತ್ತು ನಂಬಿಕೆ ಬೆಳೆಸುವುದರಲ್ಲಿ ಕ್ಯಾಂಪ್‌ಗಳ ಮಹತ್ವ ಹೆಚ್ಚಿನದು. ಇಲ್ಲಿ ನಡೆಸುವ ಚಟುವಟಿಕೆಗಳಲ್ಲಿ ಯಾವುದೇ ಬೇಧಭಾವ ಇರುವುದಿಲ್ಲ. ಮಕ್ಕಳು ಇಲ್ಲಿ ಎಲ್ಲರೊಂದಿಗೆ ಸಮಾನವಾಗಿ ವರ್ತಿಸುವುದನ್ನು ಕಲಿತುಕೊಳ್ಳುತ್ತಾರೆ. ಶಿಬಿರಗಳು ಮಕ್ಕಳ ಮನಸ್ಸಿನ ಭಾರವನ್ನು ಇಳಿಸುತ್ತವೆ. ಪರೀಕ್ಷೆಗಳಜಂಜಡಗಳಿಂದ ಬಳಲಿದ ಮಕ್ಕಳ ಮನಸ್ಸಿಗೆ ಮುದವನ್ನು ನೀಡುತ್ತದೆ. ಕಲೆ, ವಿಶಿಷ್ಟ ರೀತಿಯ ಶಿಕ್ಷಣ, ಯೋಗ, ವೈಜ್ಞಾನಿಕ ಪ್ರಯೋಗಗಳು, ಆಟೋಟ ಇತ್ಯಾದಿ ಚಟುವಟಿಕೆಗಳು ಮಕ್ಕಳಿಗೆ ಹೊಸ ನೆಲೆಗಟ್ಟನ್ನು ಒದಗಿಸುತ್ತದೆ.
ಕಿಡ್ಸ್ ಕ್ಯಾಂಪ್ ಯಾವ ವಯಸ್ಸಿನ ಮಕ್ಕಳಿಗಾಗಿ:-5 ರಿಂದ13 ವರ್ಷ ವಯಸ್ಸಿನ ಎಲ್ಲಾ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಬಹುದು.
ಕಿಡ್ಸ್ ಕ್ಯಾಂಪ್ ನಡೆಯುವ ದಿನಾಂಕ, ಸಮಯ ಮತ್ತು ಸ್ಥಳ:-22-04-2024 ಸೋಮವಾರ ದಿಂದ 29-04-2024 ಸೋಮವಾರದ ತನಕ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರ ವರೆಗೆ ನಡೆಯುತ್ತದೆ. IRCMD Education Center, Swagath Complex, Puttur.
ಶಾಲೆಯಲ್ಲಿ ಯಾಂತ್ರಿಕವಾಗಿ ಕಲಿಯುವ ಮಕ್ಕಳನ್ನು ಸೃಜನಾತ್ಮಕವಾಗಿ ಯೋಚಿಸಿ ಕಾರ್ಯತತ್ಪರಾಗುವಂತೆ ಮಾಡಿಸಿ, ಕಲೆ, ವಿಜ್ಞಾನ, ಭಾಷಾ ಕಲಿಕೆ ಚಟುವಟಿಕೆಗಳು ಸೇರಿದಂತೆ ಹತ್ತು ಹಲವು ವಿಶೇಷ ಆಕರ್ಷಕ ಚಟುವಟಿಕೆಗಳನ್ನು ಈ ಕ್ಯಾಂಪ್ ನಲ್ಲಿ ಅಳವಡಿಸಿಕೊಂಡಿದ್ದು 22-04-2024 ಸೋಮವಾರ ದಿಂದ 29-04-2024 ಸೋಮವಾರದ ತನಕ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರ ವರೆಗೆ ಪುತ್ತೂರಿನ ಅರುಣಾ ಕಲಾ ಮಂದಿರದ ಬಳಿ ಕಾರ್ಯಾಚರಿಸುತ್ತಿರುವ IRCMD ಶಿಕ್ಷಣ ಸಂಸ್ಥೆಯಲ್ಲಿ ಒಟ್ಟು 7 ದಿನದ ಕ್ಯಾಂಪ್ ನಡೆಯಲಿದೆ.
ನೋಂದಾವಣೆಗಾಗಿ:-5 ವರ್ಷದಿಂದ 13ವರ್ಷದ ಮಕ್ಕಳಿಗೆ ಪ್ರವೇಶ ಕಲ್ಪಿಸಲಾಗಿದ್ದು, ಪ್ರವೇಶವನ್ನು ಪಡೆಯಲಿಚ್ಛಿಸುವವರು 9945988118 ಅಥವಾ 9632320477 ಅನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಪ್ರಫುಲ್ಲ ಗಣೇಶ್ ಅವರು ತಿಳಿಸಿರುತ್ತಾರೆ.