Home ತಾಜಾ ಸುದ್ದಿ ಯುಗಾದಿ ದಿನ ಬೇವು ಬೆಲ್ಲ ಸೇವನೆ ಮಾಡೋದು ಯಾಕೆ?

ಯುಗಾದಿ ದಿನ ಬೇವು ಬೆಲ್ಲ ಸೇವನೆ ಮಾಡೋದು ಯಾಕೆ?

0

ಯುಗಾದಿ ಹಬ್ಬದ ದಿನ ಮುಂಜಾನೆ ಎದ್ದು ಅಭ್ಯಂಜನ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಮನೆಯನ್ನು ತಳಿರು ತೋರಣಗಳಿಂದ ಸಿಂಗಾರ ಮಾಡಲಾಗುತ್ತದೆ. ಈ ದಿನ ದೇವರಿಗೆ ಪೂಜೆ ಮಾಡಿ ಹಬ್ಬದ ತಿನಿಸು ತಿನ್ನುವ ಮುನ್ನ ಬೇವು ಬೆಲ್ಲ ಸೇವನೆ ಮಾಡಲಾಗುತ್ತದೆ. ಬೇವು ಬೆಲ್ಲದ ಸೇವನೆ ಯಾಕೆ ಮಾಡಬೇಕು ಅನ್ನೋದಕ್ಕೆ ಒಂದಿಷ್ಟು ಮಾಹಿತಿ ಇಲ್ಲಿದೆ.


 

ಬೇವು ಬೆಲ್ಲವನ್ನು ಮಿಕ್ಸ್ ಮಾಡಿಕೊಂಡು ಎರಡನ್ನೂ ಸೇವನೆ ಮಾಡಬೇಕು. ಯಾಕೆ ಗೊತ್ತ. ಬೇವು-ಬೆಲ್ಲವು ಸುಖ-ದುಃಖ, ರಾತ್ರಿ-ಹಗಲು ಇವುಗಳ ಸಂಕೇತಗಳಾಗಿವೆ. ಮಾನವರ ಬದುಕಿನಲ್ಲಿ ಸುಖ-ದುಃಖಗಳು ಅವಿಭಾಜ್ಯ ಅಂಶಗಳು. ಇವೆಲ್ಲವುಗಳೊಂದಿಗೆ ಸಮತೋಲನ ಕಾಯ್ದುಕೊಂಡೇ ಮನುಷ್ಯ ಬದುಕಬೇಕು. ಜೀವನ ಕಷ್ಟ-ಸುಖ. ನೋವು ನಲಿವುಗಳ ಸಮ್ಮಿಶ್ರಣವಾಗಿದೆ. ಇವೆರಡೂ ಒಟ್ಟಿಗೆ ಇರುವವು. ಎರಡನ್ನೂ ಸಮದೃಷ್ಟಿಯಿಂದ ಸವಿಯುವುದನ್ನು ಕಲಿಯಲೆಂದೇ ಯುಗಾದಿಯಂದು ಬೇವು-ಬೆಲ್ಲವನ್ನು ನೀಡಲಾಗುತ್ತದೆ. .

ಜೀವನದಲ್ಲಿ ನಮಗೆ ಕೇವಲ ಸಂತೋಷ ಮಾತ್ರ ಬೇಕು ಎಂದರೆ ಸಿಗೋದಿಲ್ಲ. ನೋವು ನಲಿವು ಎರಡಕ್ಕೂ ನಾವು ಸ್ವಾಗತ ನೀಡಬೇಕು. ಎರಡು ಜೊತೆಯಾದಾಗ ಮಾತ್ರ ಜೀವನದ ನಿಜವಾದ ಅರ್ಥ ನಮಗೆ ತಿಳಿಯುತ್ತದೆ.

ಯುಗಾದಿ ಹಬ್ಬದ ದಿನ ಬೇವು ಬೆಲ್ಲವು ಸಂಪ್ರದಾಯದ ಪ್ರಕಾರ ಸವಿದರೂ ಅದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಬೇವು ಉತ್ತಮ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದು , ಔಷಧಿ ಉಪಯುಕ್ತ ಸಸ್ಯವಾಗಿದೆ. ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗೆಯೇ ಬೆಲ್ಲವೂ ಉತ್ತಮ ಪ್ರೋಟಿನ್‌, ಖನಿಜಾಂಶವನ್ನು ಹೊಂದಿದ್ದು , ಅಗತ್ಯ ಪೋಷಕಾಂಶವನ್ನು ಒದಗಿಸುತ್ತದೆ. ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

LEAVE A REPLY

Please enter your comment!
Please enter your name here