Home ಉಡುಪಿ ಉಡುಪಿ: ಯಕ್ಷಗಾನ ವೇಷ ಧರಿಸಿ ಐಎಎಸ್,‌ ಐಪಿಎಸ್,‌ ಕೆಎಎಸ್ ಅಧಿಕಾರಿಗಳಿಂದ ಮತದಾನ ಜಾಗೃತಿ

ಉಡುಪಿ: ಯಕ್ಷಗಾನ ವೇಷ ಧರಿಸಿ ಐಎಎಸ್,‌ ಐಪಿಎಸ್,‌ ಕೆಎಎಸ್ ಅಧಿಕಾರಿಗಳಿಂದ ಮತದಾನ ಜಾಗೃತಿ

0

ಉಡುಪಿ : ಉಡುಪಿ ಜಿಲ್ಲಾಡಳಿತ ವ್ಯಾಪಕವಾಗಿ ಮುಂಬರುವ ಲೋಕಸಭೆ ಚುನಾವಣೆಗಾಗಿ ಮತದಾನ ಜಾಗೃತಿಯಲ್ಲಿ ತೊಡಗಿದೆ. ಮತಜಾಗೃತಿಗಾಗಿ‌ ಸ್ವೀಪ್ ಸಮಿತಿ ವಿವಿಧ ಕಾರ್ಯಕ್ರಮಗಳನ್ನು ‌ಹಮ್ಮಿಕೊಂಡಿದ್ದು, ರಾಜ್ಯದಲ್ಲೇ ವಿಶೇಷ ಎಂಬಂತೆ ಜಿಲ್ಲೆಯ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ಯಕ್ಷಗಾನ ವೇಷಧರಿಸಿ‌ ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಿ ಗಮನ ಸೆಳೆದಿದ್ದಾರೆ. ಕರಾವಳಿಯ ಪ್ರಸಿದ್ದ ಜಾನಪದ ಕಲೆ ಯಕ್ಷಗಾನ ಎಲ್ಲರಿಗೂ ಅಚ್ಚುಮೆಚ್ಚು. ಈ ಕಲೆಯ ಮೂಲಕ ಈಗಾಗಲೇ ಮತದಾನದ ಜಾಗೃತಿ ಬಗ್ಗೆ ಹಲವು ಕಾರ್ಯಕ್ರಮ ಏರ್ಪಡಿಸಲಾಗಿದೆ.‌ ಈ‌ ಭಾರಿ ಸ್ವತಃ ಅಧಿಕಾರಿಗಳೇ ಈ ರೀತಿ ಯಕ್ಷಗಾನ ಕಲೆಯ ವೇಷ ಧರಿಸಿ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ. ಉಡುಪಿ ಜಿ. ಪಂ. ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ‌ಮಮತಾ ದೇವಿ, ಕುಂದಾಪುರ ಉಪ ವಿಭಾಗ ಸಹಾಯಕ ಆಯುಕ್ತರಾದ ರಶ್ಮಿ, ಕರಾವಳಿ‌ ಕಾವಲು‌ ಪಡೆ ಪೊಲಿಸ್ ‌ಅಧೀಕ್ಷಕ ಮಿಥುನ್‌ ಅವರು ಬಡಗುತಿಟ್ಟು‌ ಯಕ್ಷಗಾನ ‌ಶೈಲಿ ವೇಷಭೂಷಣ ಧರಿಸಿ ಜಿಲ್ಲೆಯ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಶೇ.100 ಮತದಾನಕ್ಕೆ‌ ಮತದಾನದ ಮಹತ್ವವನ್ನು ಸಾರಿ ಎಲ್ಲರೂ‌ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡು ಮತದಾನ ಮಾಡುವಂತೆ ಕರೆ ನೀಡಿದ್ದಾರೆ‌‌.


LEAVE A REPLY

Please enter your comment!
Please enter your name here