ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರಮುಖ ಖಾಸಗಿ ಇಂಧನ ಕಂಪನಿಯಾದ ‘ನಯಾರಾ ಎನರ್ಜಿ’ (Nayara Energy) ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ.


ತನ್ನ ಗ್ರಾಹಕರಿಗೆ ನೆರವಾಗಲು ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಗಣನೀಯವಾಗಿ ಕಡಿತಗೊಳಿಸಿದೆ.ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಏರಿಳಿತಗಳು ಮತ್ತು ಕಚ್ಚಾ ತೈಲದ ಬೆಲೆ ಇಳಿಕೆಯ ಲಾಭವನ್ನು ನಾವು ನೇರವಾಗಿ ಗ್ರಾಹಕರಿಗೆ ತಲುಪಿಸಲು ಬಯಸುತ್ತೇವೆ. ದೇಶಾದ್ಯಂತ ಇರುವ ನಮ್ಮ ಇಂಧನ ಮರುಕಟಾವಣೆ ಕೇಂದ್ರಗಳಲ್ಲಿ (Fuel Stations) ಈ ನೂತನ ದರಗಳು ಜಾರಿಗೆ ಬರಲಿವೆ ಎಂದು ಕಂಪನಿ ತಿಳಿಸಿದೆ.

ದೇಶದಲ್ಲಿ ಸಾರ್ವಜನಿಕ ವಲಯದ ತೈಲ ಕಂಪನಿಗಳಾದ IOCL, BPCL ಮತ್ತು HPCL ಇಂಧನ ದರಗಳನ್ನು ಸ್ಥಿರವಾಗಿಟ್ಟಿರುವ ಬೆನ್ನಲ್ಲೇ, ನಯಾರಾ ಎನರ್ಜಿ ಕೈಗೊಂಡಿರುವ ಈ ನಿರ್ಧಾರವು ಗ್ರಾಹಕರಿಗೆ ದೊಡ್ಡ ಮಟ್ಟದ ನಿರಾಳತೆ ತಂದಿದೆ. ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ವ್ಯಾಪಕ ನೆಟ್ವರ್ಕ್ ಹೊಂದಿರುವ ನಯಾರಾ ಇಂಧನ ಬಂಕ್ಗಳ ಗ್ರಾಹಕರಿಗೆ ಇದರಿಂದ ನೇರ ಲಾಭ ಸಿಗಲಿದೆ.




