ಮಂಗಳೂರು: ನಗರದ ಟಿ.ಟಿ.ರಸ್ತೆ ನಿವಾಸಿ ನಾಟಕ ಕಲಾವಿದ, ಹಾಡುಗಾರ ಎಸ್.ರಾಮದಾಸ್(86) ಅಲ್ಪಕಾಲದ ಅಸೌಖ್ಯದಿಂದ ಮಾ.27ರಂದು ಸ್ವಗೃಹದಲ್ಲಿ ನಿಧನರಾದರು.
ಧಾರ್ಮಿಕ ದತ್ತಿ ಇಲಾಖೆಯಲ್ಲಿ 32ವರ್ಷ ಸೇವೆ ಸಲ್ಲಿಸಿದ ಅವರು ನಿವೃತ್ತಿ ಬಳಿಕ ಕಲ್ಕೂರ ಜಾಹಿರಾತು ಸಂಸ್ಥೆಯಲ್ಲಿ ಕೆಲವು ವರ್ಷ ಉದ್ಯೋಗಿಯಾಗಿದ್ದರು. ಹವ್ಯಾಸಿ ಕಲಾವಿದರಾಗಿದ್ದ ಅವರು ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು. ಮಾಸ್ಟರ್ ವಿಠ್ಠಲ್ ಜತೆಯಲ್ಲಿ 40 ವರ್ಷರಿಂದ ಹಾಡುಗಾರನಾಗಿ, ಪ್ರಸಾಧಾನ ಕಲಾವಿದರಾಗಿ, ಪ್ರಸಿದ್ಧಿ ಹೊಂದಿದ್ದರು. ಮಂಗಳೂರು ಆಕಾಶವಾಣಿಯಲ್ಲಿ ಭಾವಗೀತೆ ಕಾರ್ಯಕ್ರಮ, ರೇಡಿಯೊ ನಾಟಕಗಳಿಗೆ ಧ್ವನಿ ನೀಡಿದ್ದರು. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಹಿತ ಹಲವು ಸಂಘಸಂಸ್ಥೆಗಳಿಂದ ಸನ್ಮಾನಿತರಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.