ಅಬುಧಾಬಿ – ಅಯೋಧ್ಯೆಯಲ್ಲಿ ಈಗಷ್ಟೇ ಶ್ರೀರಾಮ ಮಂದಿರದ ನಿರ್ಮಾಣವಾಯಿತು ಹಾಗೂ ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠೆಯ ಭವ್ಯ ಉತ್ಸವವನ್ನು ಸಂಪೂರ್ಣ ಭಾರತವು ಅನುಭವಿಸಿತು. ಈಗ ಯು.ಎ.ಈ. ನಂತಹ ಮುಸಲ್ಮಾನ ದೇಶದಲ್ಲಿಯೂ ಭವ್ಯವಾದ ಬಿ.ಎ.ಪಿ.ಎಸ್ ಮಂದಿರದ ನಿರ್ಮಾಣವಾಗಿದೆ. ಇದು ಒಂದು ರೀತಿಯಲ್ಲಿ ವಿಶ್ವಾದ್ಯಂತ ಹಿಂದೂ ರಾಷ್ಟ್ರ ನಿರ್ಮಾಣದ ನಾಂದಿಯಾಗಿದೆ, ಎಂದು ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ವ್ಯಕ್ತಪಡಿಸಿದರು. ಅವರು ಅಬುಧಾಬಿಯಲ್ಲಿನ ದೇವಸ್ಥಾನದ ಉದ್ಘಾಟನೆಯ ಕಾರ್ಯಕ್ರಮದ ನಂತರ ಮಾತನಾಡುತ್ತಿದ್ದರು.
ಈ ಸಮಯದಲ್ಲಿ ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಮಾತನಾಡುತ್ತ ಕಳೆದ ಅನೇಕ ಶತಕಗಳಲ್ಲಿ ಭಾರತದಲ್ಲಿನ ಹಿಂದೂ ಮಂದಿರಗಳ ಮೇಲೆ ಆಕ್ರಮಣಗಳಾಗಿವೆ, ದೇವಸ್ಥಾನಗಳನ್ನು ಧ್ವಂಸಗೊಳಿಸಲಾಗಿದೆ. ಈಗ ಭಾರತದಲ್ಲಿನ ಇಂತಹ ವಾಸ್ತುಗಳು ಕಾನೂನುಬದ್ಧ ಹೋರಾಟದಿಂದ ಪುನಃ ಹಿಂದೂ ಸಮಾಜಕ್ಕೆ ದೊರೆಯಲು ಆರಂಭವಾಗಿದೆ. ಹಿಂದೂ ಧರ್ಮದ ಮಹಾನತೆಯು ಕಾಲಾನುಸಾರ ವಿಶ್ವದಾದ್ಯಂತ ಪಸರಿಸುತ್ತಿದೆ. ಇದು ಕಾಲಚಕ್ರವಾಗಿದೆ, ಇದನ್ನು ತಡೆಯಲು ಸಾಧ್ಯವಿಲ್ಲ. ಇದು ಭಾರತವು ವಿಶ್ವಗುರು ಪದವಿಯೆಡೆಗೆ ಮಾರ್ಗಕ್ರಮಣ ಮಾಡುತ್ತಿರುವುದರ ದ್ಯೋತಕವಾಗಿದೆ, ಎಂದು ಹೇಳಿದರು.
ಪಶ್ಚಿಮ ಏಷ್ಯಾದಲ್ಲಿನ ಎಲ್ಲಕ್ಕಿಂತ ದೊಡ್ಡ ಹಿಂದೂ ದೇವಸ್ಥಾನವಾಗಿರುವ `ಬಿ. ಎ. ಪಿ. ಎಸ್. ಹಿಂದೂ ಮಂದಿರ’ವನ್ನು ಫೆಬ್ರುವರಿ 15 ರಂದು ಪ್ರಧಾನಮಂತ್ರಿ ಮಾನ್ಯ ನರೇಂದ್ರ ಮೋದಿಯವರ ಹಸ್ತದಿಂದ ಉದ್ಘಾಟಿಸಲಾಯಿತು. ಈ ನಿಮಿತ್ತವಾಗಿ ದೇವಸ್ಥಾನದ ವತಿಯಿಂದ ಫೆಬ್ರವರಿ 15 ರಂದು ಆಯೋಜಿಸಲಾಗಿದ್ದ `ಹಾರ್ಮೋನಿ’ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳರವರ ವಂದನೀಯ ಉಪಸ್ಥಿತಿಯಿತ್ತು. ದೇವಸ್ಥಾನದ ಪದಾಧಿಕಾರಿಗಳಾದ ಶ್ರೀ. ರವೀಂದ್ರ ಕದಮರವರು ದೇವಸ್ಥಾನದ ವತಿಯಿಂದ ಅಕ್ಟೋಬರ್ 2023ರಲ್ಲಿ ಉದ್ಘಾಟನಾ ಸಮಾರಂಭದ ಆಮಂತ್ರಣವನ್ನು ಕಳುಹಿಸಿದ್ದರು. ದೇವಸ್ಥಾನದ ಪ್ರಮುಖ ಮಹಂತರಾದ ಸ್ವಾಮಿ ಮಹಾರಾಜರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮವು ಜರುಗಿದೆ. ಈ ಕಾರ್ಯಕ್ರಮಕ್ಕೆ ಹರಿದ್ವಾರ ಅಖಾಡಾದ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದರು `ಪ್ರಮುಖ ಅತಿಥಿ’ಗಳಾಗಿ ಉಪಸ್ಥಿತರಿದ್ದರು. ಸ್ವಾಮಿ ಬ್ರಹ್ಮವಿಹಾರಿದಾಸ ಮಹಾರಾಜರು ಸ್ವಾಗತ ಭಾಷಣ ಮಾಡಿದರು.
ಸನಾತನ ಸಂಸ್ಥೆಯ 3 ಗುರುಗಳ ಹೆಸರಿನಲ್ಲಿ ದೇವಸ್ಥಾನದ ಕಾಮಗಾರಿಗಾಗಿ 3 ಇಟ್ಟಿಗೆ ಅರ್ಪಣೆ !
ಜುಲೈ 2022 ರಲ್ಲಿ ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಸಂಶೋಧನೆಯ ನಿಮಿತ್ತ ಅರಬ್ ದೇಶಗಳ ಪ್ರವಾಸದಲ್ಲಿದ್ದರು. ಆಗ `ಬಿ. ಎ. ಪಿ. ಎಸ್. ಹಿಂದೂ ಮಂದಿರ’ಕ್ಕೆ ಭೇಟಿಯಾಗಿ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿ ಸನಾತನ ಸಂಸ್ಥೆಯ 3 ಗುರುಗಳ ಹೆಸರಿನಲ್ಲಿ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳರವರ ಹೆಸರಿನಲ್ಲಿ) ದೇವಸ್ಥಾನದ ಕಾಮಗಾರಿಗಾಗಿ 3 ಇಟ್ಟಿಗೆಗಳನ್ನು ಪೂಜಿಸಿ ಅರ್ಪಿಸಿದ್ದರು.