Home ತಾಜಾ ಸುದ್ದಿ ಮಾ.11ರಿಂದ ‘5, 8, 9ನೇ ತರಗತಿ ವಿದ್ಯಾರ್ಥಿ’ಗಳಿಗೆ ‘ಪಬ್ಲಿಕ್ ಪರೀಕ್ಷೆ’: ‘ಅಂತಿಮ ವೇಳಾಪಟ್ಟಿ’ ಪ್ರಕಟ

ಮಾ.11ರಿಂದ ‘5, 8, 9ನೇ ತರಗತಿ ವಿದ್ಯಾರ್ಥಿ’ಗಳಿಗೆ ‘ಪಬ್ಲಿಕ್ ಪರೀಕ್ಷೆ’: ‘ಅಂತಿಮ ವೇಳಾಪಟ್ಟಿ’ ಪ್ರಕಟ

0

ಬೆಂಗಳೂರು: ಈಗಾಗಲೇ ರಾಜ್ಯ ಪಠ್ಯಕ್ರಮದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳ 5, 8 ಮತ್ತು 9ನೇ ತರಗತಿ ಮಕ್ಕಳಿಗೆ 2023-24ನೇ ಸಾಲಿನ ಸಂಕಲನಾತ್ಮಕ ಮೌಲ್ಯಾಂಕನ ( SA-2) ಪರೀಕ್ಷೆಗೆ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು.


ಇದೀಗ ಅಂತಿಮ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.

ಈ ಕುರಿತಂತೆ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತಿನಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, 2023-24ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5. 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಾಂಕನ (Summative Assessment-(SA-2) ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಲಿಯ ಕೆ.ಎಸ್.ಕ್ಯು.ಎ.ಎ.ಸಿ ವತಿಯಿಂದ ನಡೆಸಲಾಗುತ್ತಿದೆ. ಸದರಿ ಮೌಲ್ಯಾಂಕನಕ್ಕೆ ಸಂಬಂಧಿಸಿದಂತೆ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ವೆಬ್‌ಸೈಟ್‌ನಲ್ಲಿhttps://kseab.karnataka.gov.in/ನಲ್ಲಿ ಪ್ರಕಟಿಸಲಾಗಿದೆ.

ಮುಂದುವರೆದು ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ) ಹಾಗೂ ಎಲ್ಲಾ ಬ್ಲಾಕುಗಳ ಕ್ಷೇತ್ರಶಿಕ್ಷಣಾಧಿಕಾರಿಗಳು ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರು/ ಪ್ರಾಂಶುಪಾಲರುಗಳಿಗೆ, ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಲು ತಿಳಿಸಿದೆ ಹಾಗೂ ಸದರಿ ಮೌಲ್ಯಾಂಕನ ಕುರಿತು ಸುತ್ತೋಲೆಯನ್ನು ಶೀಘ್ರದಲ್ಲಿಯೇ ನೀಡಲಾಗುವುದು ಎಂದು ತಿಳಿಸಲಾಗಿದೆ‌.

ಹೀಗಿದೆ 5, 8 ಮತ್ತು 9ನೇ ತರಗತಿ ಪಬ್ಲಿಕ್ ಪರೀಕ್ಷೆಯ ಅಂತಿಮ ವೇಳಾಪಟ್ಟಿ

ಹೀಗಿದೆ ಮಾರ್ಚ್-2024ರ 5ನೇ ತರಗತಿ ಮೌಲ್ಯಾಂಕನ ಕಾರ್ಯದ ತಾತ್ಕಾಲಿಕ ವೇಳಾಪಟ್ಟಿ

  • ದಿನಾಂಕ 11-03-2024ರ ಸೋಮವಾರ – ಪ್ರಥಮ ಭಾಷೆ – ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು.
  • ದಿನಾಂಕ 12-03-2023ರ ಮಂಗಳವಾರ- ದ್ವಿತೀಯ ಭಾಷೆ – ಇಂಗ್ಲೀಷ್, ಕನ್ನಡ
  • ದಿನಾಂಕ 13-03-2024ರ ಬುಧವಾರ – ಕೋರ್ ವಿಷಯ – ಪರಿಸರ ಅಧ್ಯಯನ
  • ದಿನಾಂಕ 14-03-2024ರ ಗುರುವಾರ- ಕೋರ್ ವಿಷಯ – ಗಣಿತಹೀಗಿದೆ ಮಾರ್ಚ್-2024ರ 8ನೇ ತರಗತಿ ಮೌಲ್ಯಾಂಕನ ಕಾರ್ಯದ ತಾತ್ಕಾಲಿಕ ವೇಳಾಪಟ್ಟಿ
    • ದಿನಾಂಕ 11-03-2024ರ ಸೋಮವಾರ – ಪ್ರಥಮ ಭಾಷೆ – ಕನ್ನಡ, ಇಂಗ್ಲೀಷ್, ಇಂಗ್ಲೀಷ್ ( NCERT), ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು, ಸಂಸ್ಕೃತ
    • ದಿನಾಂಕ 12-03-2024ರ ಮಂಗಳವಾರ – ದ್ವಿತೀಯ ಭಾಷೆ – ಇಂಗ್ಲೀಷ್, ಕನ್ನಡ.
    • ದಿನಾಂಕ 13-03-2024ರ ಬುಧವಾರ – ತೃತೀಯ ಭಾಷೆ – ಹಿಂದಿ, ಹಿಂದಿ ( NCERT), ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು.
    • ದಿನಾಂಕ 14-03-2024ರ ಗುರುವಾರ – ಕೋರ್ ವಿಷಯ – ಗಣಿತ.
    • ದಿನಾಂಕ 15-03-2024ರ ಶುಕ್ರವಾರ – ಕೋರ್ ವಿಷಯ – ವಿಜ್ಞಾನ.
    • ದಿನಾಂಕ 16-03-2024ರ ಶನಿವಾರ – ಕೋರ್ ವಿಷಯ- ಸಮಾಜ ವಿಜ್ಞಾನ.
    • ದಿನಾಂಕ 18-03-2024ರ ಸೋಮವಾರ – ದೈಹಿಕ ಶಿಕ್ಷಣ.ಹೀಗಿದೆ ಮಾರ್ಚ್-2024ರ 9ನೇ ತರಗತಿ ಮೌಲ್ಯಾಂಕನ ಕಾರ್ಯದ ತಾತ್ಕಾಲಿಕ ವೇಳಾಪಟ್ಟಿ
      • ದಿನಾಂಕ 11-03-2024ರ ಸೋಮವಾರ- ಪ್ರಥಮ ಭಾಷೆ – ಕನ್ನಡ, ಇಂಗ್ಲೀಷ್, ಇಂಗ್ಲೀಷ್(NCERT), ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು, ಸಂಸ್ಕೃತ.
      • ದಿನಾಂಕ 12-03-2024ರ ಮಂಗಳವಾರ – ದ್ವಿತೀಯ ಭಾಷೆ – ಇಂಗ್ಲೀಷ್, ಕನ್ನಡ.
      • ದಿನಾಂಕ 14-03-2024ರ ಗುರುವಾರ – ಕೋರ್ ವಿಷಯ – ಗಣಿತ
      • ದಿನಾಂಕ 15-03-2024ರ ಶುಕ್ರವಾರ – ಕೋರ್ ವಿಷಯ – ವಿಜ್ಞಾನ
      • ದಿನಾಂಕ 16-03-2024ರ ಶನಿವಾರ – ಕೋರ್ ವಿಷಯ – ಸಮಾಜ ವಿಜ್ಞಾನ
      • ದಿನಾಂಕ 18-03-2024ರ ಸೋಮವಾರ – ದೈಹಿಕ ಶಿಕ್ಷಣ.

LEAVE A REPLY

Please enter your comment!
Please enter your name here