Home ಕರಾವಳಿ ಜಾರಂದಗುಡ್ಡೆ: ಉಚಿತ ನೇತ್ರಾ ಚಿಕಿತ್ಸಾ ಶಿಬಿರ, ಕನ್ನಡಕ ವಿತರಣೆ

ಜಾರಂದಗುಡ್ಡೆ: ಉಚಿತ ನೇತ್ರಾ ಚಿಕಿತ್ಸಾ ಶಿಬಿರ, ಕನ್ನಡಕ ವಿತರಣೆ

0

ಬಂಟ್ವಾಳ:  ರೋಟರಿ ಕ್ಲಬ್ ಮೊಡಂಕಾಪು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಂಚಾರಿ ನೇತ್ರ ಘಟಕ ಜಿಲ್ಲಾ ಆಸ್ಪತ್ರೆ ಪ್ರಾಥಮಿಕ ಆರೋಗ್ಯ ಕೇಂದ್ರ ಪುದು,ಹಾಗೂ  ಕಳ್ಳಿಗೆ ಗ್ರಾಮ ಪಂಚಾಯತ್, ಲಕ್ಷ್ಮಿ ವಿಷ್ಣು ಸೇವಾ ಸಂಘ ಜಾರಂದಗುಡ್ಡೆ, ಸೀನಿಯರ್ ಛೇಂಬರ್ ಬಂಟ್ವಾಳ ನೇತ್ರಾವತಿ ಸಂಗಮ ಇವರ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ಪರೀಕ್ಷೆ ಮತ್ತು ಕನ್ನಡಕ ವಿತರಣಾ ಶಿಬಿರ ಕಳ್ಳಿಗೆ ಗ್ರಾಮದ ಜಾರಂದಗುಡ್ಡೆಯಲ್ಲಿ ಶುಕ್ರವಾರ ನಡೆಯಿತು.


ಶ್ರೀ ದುರ್ಗಾ ಕ್ಲಿನಿಕ್ ಗಡಿಯಾರ ಮಾಣಿಯ ಡಾ| ಮನೋಹರ್ ರೈ ಮಾಣಿ‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಮಟ್ಟದಲ್ಲಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬನ ಜವಾಬ್ದಾರಿಯಾಗಿದೆ ಎಂದರು.

ವೆನ್ ಲಾಕ್ ನ ನೇತ್ರಾಧಿಕಾರಿ ಡಾ| ಅನಿಲ್ ರಾಮಾನುಜಂ ಕಣ್ಣಿನ ದಾನ ಮತ್ತು ಅಂಗಾಂಗ ದಾನದ ಮಹತ್ವ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಅರುಣ್ ಶರ್ಮ ಪನ್ನಡ್ಕ, ಉದ್ಯಮಿ ದಿನಕರ್ ಬಂಜನ್ ಬರೆ, ಕಳ್ಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ
ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಸಾಮಾಜಿಕ ಕಾರ್ಯಕರ್ತೆ ಶಶಿಪ್ರಭ ಗುತ್ತಹಿತ್ತಿಲು, ಸೀನಿಯರ್ ಛೇಂಬರ್ ಉಪಾಧ್ಯಕ್ಷ ಆದಿರಾಜ್ ಜೈನ್, ಕೋಶಾಧಿಕಾರಿ ಸತ್ಯನಾರಾಯಣ ರಾವ್, ಗ್ರಾಮ ಪಂ. ಸದಸ್ಯ ಮನೊಜ್ ವಳವೂರು, ವೆನ್ ಲಾಕ್ ‌ಆಸ್ಪತ್ರೆ ನೇತ್ರ ತಜ್ಞೆ ಡಾ |ಪ್ರೇರಣಾ , ಪಿಡಿಒ ಚಂದ್ರಾವತಿ, ಲಕ್ಷ್ಮಿ ವಿಷ್ಣು ಸಂಘದ ಅಧ್ಯಕ್ಷ ಸುಧೀಂದ್ರ, ಉಪಸ್ಥಿತರಿದ್ದರು.

ನಿವೃತ್ತವ ಯೋಧ ಅಲೆಕ್ಸಾಂಡರ್ ಲೋಬೊ ರವರು ಮರಣಾನಂತರ ದೇಹದಾನ ಮಾಡುವುದಾಗಿ ಘೋಷಿಸಿದರು.

ರೋಟರಿ ಅಧ್ಯಕ್ಷ ಪಿ.ಎ.ರಹೀಂ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೀನಿಯರ್ ಛೇಂಬರ್ ಅಧ್ಯಕ್ಷ ಡಾ.ಆನಂದ್ ಬಂಜನ್ ಸ್ವಾಗತಿಸಿದರು. ಸ್ಥಾಪಕಾಧ್ಯಕ್ಷ ಜಯಾನಂದ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.ಸುಧೀರ್ ಜಾರಂದಗುಡ್ಡೆ ಧನ್ಯವಾದವಿತ್ತರು.

ಶಿಬಿರದಲ್ಲಿ 118 ಫಲಾನುಭವಿಗಳಿದ್ದು 65 ಅರ್ಹರಿಗೆ ಕನ್ನಡಕ ವಿತರಿಸಲಾಯ್ತು.
16 ಜನರಿಗೆ ಕಣ್ಣಿನ ಪೊರೆ ಚಿಕಿತ್ಸೆಗೆ ಆಯ್ಕೆ ಮಾಡಲಾಯ್ತು.15 ಮಂದಿ‌ ಅಂಗಾಂಗ ದಾನಮಾಡಲು ಹೆಸರು ದಾಖಲು ಮಾಡಿದರು.

LEAVE A REPLY

Please enter your comment!
Please enter your name here