Home ಕರಾವಳಿ ಡಿ.1 ರಂದು “ರಾಪಟ” ತುಳು ಸಿನೆಮಾ ಬಿಡುಗಡೆ

ಡಿ.1 ರಂದು “ರಾಪಟ” ತುಳು ಸಿನೆಮಾ ಬಿಡುಗಡೆ

0

ಬೊಳ್ಳಿ ಮೂವೀಸ್ ಹಾಗೂ ಅವಿಕಾ ಪ್ರೊಡಕ್ಷನ್ಸ್ ನಿರ್ಮಾಣದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ,
ಸಂಭಾಷಣೆ, ಸಾಹಿತ್ಯ ಬರೆದು, ಅರ್ಜುನ್ ಕಾಪಿಕಾಡ್ ನಿರ್ದೇಶನದ ಎರಡನೇ ಸಿನಿಮಾ ರಾಪಟ ಡಿ.1 ರಂದು ಅದ್ದೂರಿಯಾಗಿ
ಕರಾಳಿಯಾದ್ಯಂತ ತೆರೆಕಾಣಲಿದೆ.

ತುಳುನಾಡಿನ ಹಾಸ್ಯ ದಿಗ್ಗಜರು ಚಿತ್ರದಲ್ಲಿ ನಟಿಸಿದ್ದು, ತಾಂತ್ರಿಕ ವಿಭಾಗದಲ್ಲೂ ಅನುಭವಿ ತಂಡ ಕೆಲಸ ಮಾಡಿದೆ. ಸಂಪೂರ್ಣ
ಹಾಸ್ಯ ಮನರಂಜನೆಯ ರಾಪಟ ಸಿನಿಮಾದಲ್ಲಿ ಉತ್ತಮ ಕತೆ ಇದೆ. ಅರ್ಜುನ್ ಕಾಪಿಕಾಡ್ ನಿರ್ದೇಶನದ ಎರಡನೇ ಸಿನಿಮಾದಲ್ಲಿ ಖ್ಯಾತ
ಕಲಾವಿದರು ಅಭಿನಯಿಸಿದ್ದಾರೆ. ಅನೂಪ್‌ ಸಾಗರ್‌ ನಾಯಕ ನಟನಾಗಿ ಹಾಗೂ ನಿರೀಕ್ಷೆ ಶೆಟ್ಟಿ ನಾಯಕಿಯ ಪಾತ್ರದಲ್ಲಿ
ಕಾಣಿಸಿಕೊಂಡಿದ್ದಾರೆ. ತುಳು ಚಿತ್ರ ರಂಗದ ದಿಗ್ಗಜರಾದ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್‌, ಭೋಜರಾಜ್
ವಾಮಂಜೂರು, ಸಾಯಿ ಕೃಷ್ಣ ಕುಡ್ಲ, ದೀಪಕ್ ರೈ ಪಾಣಾಜೆ, ರೂಪ ವರ್ಕಾಡಿ ಪ್ರಕಾಶ್ ತೂಮಿನಾಡು, ವಿಶಾ
ರವಿರಾಮ ಕುಂಜ ಮುಂತಾದವರು ನಟಿಸಿದ್ದು, ಸಹ ನಿರ್ದೇಶಕರಾಗಿ ಶನಿಲ್ ಗುರು, ಸಿನಿಮಾಟೋಗ್ರಾಫರ್ ರಾಗಿ
ಸಚಿನ್’ ಎಸ್.ಶೆಟ್ಟಿ, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸಂದೀಪ್ ಶೆಟ್ಟಿ, ಎಡಿಟರ್‌ ಯಶ್ವಿನ್.ಕೆ. ಶೆಟ್ಟಿಗಾರ್,ಸಂಗೀತ ಪ್ರಸಾದ್‌.ಕೆ. ಶೆಟ್ಟಿ,
ನಿರ್ಮಾಪಕರಾಗಿ ಸಂತೋಷ್ ಸುವರ್ಣ, ಸೂರ್ಯಕಾಂತ್ ಸುವರ್ಣ, ರಾಜನ್ ರಾಕೇಶ್ ಶೆಟ್ಟಿ, ಆಶಿಕಾ ಸುವರ್ಣ,
ದೇವಿಕಾ ಆಚಾರ್ಯ, ಶೈಲರಾಜ್ ಪೂಜಾರಿ, ಅಭಿಶೆಟ್ಟಿ, ಮನೋಚ್ ಶೆಟ್ಟಿ, ಯಕ್ಷಿತ್ ಶೆಟ್ಟಿ, ಮಧು ಕುಮಾರ್
ಕಾರ್ಯನಿರ್ವಹಿಸಿದ್ದಾರೆ. ರಾಪಟ ತುಳು ಸಿನಿಮಾ ಸೆಪ್ಟೆಂಬರ್ ) ಮತ್ತು 10ರಂದು ಯುಎಇ,ಸೆ. 15ರಂದು ಬಹರೈನ್,
ಸೆ.22ರಂದು ಮಸ್ಕತ್, ಸೆ.29ರಂದು ಕತಾರ್‌ನಲ್ಲಿ , ಮಣಿಪಾಲದಲ್ಲಿ ನ.25 ಮತ್ತು 26ರಂದು ಪ್ರೀಮಿಯರ್ ಶೋ ಮೂಲಕ
ಚಿತ್ರ ಜನಮನ್ನಣೆ ಪಾತ್ರವಾಗಿದೆ. ಸಿನಿಮಾ ವೀಕ್ಷಿಸಿದ ನಿಪ್ರೇಕ್ಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಾಸ್ಯ ಮಿಶ್ರಿತ ಮನರಂಜನೆ ಮತ್ತು ಉತ್ತಮ ಸಂದೇಶ ಈ ಚಿತ್ರದಲ್ಲಿದ್ದು, ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಸಿನಿಮಾ ಮೂಡಿಬಂದಿದೆ.

LEAVE A REPLY

Please enter your comment!
Please enter your name here