Home ತಾಜಾ ಸುದ್ದಿ ಬಿಗ್ ಬಾಸ್ ಮನೆಗೆ ಹಾಟ್ ಹಾಟ್ ಬೆಡಗಿ ಪವಿ ಪೂವಪ್ಪ ಎಂಟ್ರಿ

ಬಿಗ್ ಬಾಸ್ ಮನೆಗೆ ಹಾಟ್ ಹಾಟ್ ಬೆಡಗಿ ಪವಿ ಪೂವಪ್ಪ ಎಂಟ್ರಿ

0

ಬೆಂಗಳೂರು : ಕಲರ್ಸ್ ಕನ್ನಡದಲ್ಲಿ ನಡೆಯುತ್ತಿರುವ ಬಿಗ್ಬಾಸ್ ಕನ್ನಡ ಆವೃತ್ತಿಯ 10ನೇ ಸೀಸನ್ ನಲ್ಲಿ ಇದೀಗ ವೈಲ್ಡ್ ಕಾರ್ಡ್ ಎಂಟ್ರಿ ಆಗಿದ್ದು, ಇಬ್ಬರು ಮನೆಯೊಳಗೆ ಎಂಟ್ರಿ ಪಡೆದಿದ್ದಾರೆ, ವೈಲ್ಡ್ ಕಾರ್ಡ್ ಮೂಲಕ ಅವಿನಾಶ್ ಶೆಟ್ಟಿ ಹಾಗೂ ಪವಿ ಪೂವಪ್ಪ ಎಂಟ್ರಿ ಆಗಿದೆ.

ಮಾಡೆಲಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ, ಬಿಕಿನಿ ಬಾಲೆ ಎಂದೇ ಖ್ಯಾತರಾಗಿರುವ ಪವಿ ಪೂವಪ್ಪ ಈ ಬಾರಿ ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಪವಿ ಪೂವಪ್ಪ ಮೂಲತಃ ಕೊಡಗಿನವರು. ಹುಟ್ಟಿದ್ದು ಕೂರ್ಗನಲ್ಲಿಯಾದರೂ, ಬೆಳೆದದ್ದು ಮಾತ್ರ ಬೆಂಗಳೂರಿನಲ್ಲಿ. ಇವರ ಪೂರ್ಣ ಹೆಸರು ಪಾನಿಕುಟ್ಟೀರ ಪವಿತ್ರಾ ಪೂವಪ್ಪ. ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಪವಿ ಪೂವಪ್ಪ ಆಗಿ ಬದಲಾಗಿದ್ದಾರೆ. ಕಾಲೇಜು ದಿನಗಳಿಂದಲೇ ಮಾಡೆಲಿಂಗ್ ಕ್ಷೇತ್ರದತ್ತ ಮುಖ ಮಾಡಿದ ಇವರು, ಮಿಸ್ ಕರ್ನಾಟಕ ಬೆಸ್ಟ್ ಬಾಡಿ ಟೈಟಲ್ ಕೂಡ ಪಡೆದುಕೊಂಡಿದ್ದಾರೆ. ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದಾರೆ. ಅನೇಕ ಪ್ರಶಸ್ತಿ ಗೌರವಗಳನ್ನೂ ಪಡೆದುಕೊಂಡಿದ್ದಾರೆ.

ಪವಿ ಸಾಂಪ್ರದಾಯಿಕ ಉಡುಗೆಗಿಂತ ತುಂಡುಡುಗೆ, ಬಿಕಿನಿ ತೊಟ್ಟಿದ್ದೇ ಹೆಚ್ಚು. ಅದರಲ್ಲೂ ಫ್ಯಾಷನ್ ಶೋಗಳಲ್ಲಿ ಹಾಟ್ ಹಾಟ್ ಆಗಿ ಕಂಡಿದ್ದೂ ಇದೆ. ಹಾಗಾಗಿ ಮಾಡೆಲಿಂಗ್ ಕ್ಷೇತ್ರದಲ್ಲಿ ಪವಿ ಅಂದರೆ ಅಚ್ಚುಮೆಚ್ಚು. ಸದ್ಯ ಮಾಡೆಲಿಂಗ್ ಜಗತ್ತಿನಿಂದ ಬಿಗ್ ಬಾಸ್ ಜಗತ್ತಿಗೆ ಎಂಟ್ರಿ ಪಡೆದಿದ್ದಾರೆ. ಜೊತೆಗೆ ತಮ್ಮ ಕಥೆ ಹೇಳುವುದಕ್ಕೂ ಅವರು ಸಿದ್ಧರಾಗಿದ್ದಾರೆ.

ಕ್ರಿಕೆಟರ್‌, ಫ್ಯಾಷನ್‌ ಮಾಡೆಲ್‌ ಆಗಿರುವ ಅವಿನಾಶ್ ಶೆಟ್ಟಿ ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾಋಡ್‌ ಎಂಟ್ರಿ ಪಡೆದಿದ್ದಾರೆ.

ಅವಿನಾಶ್ ಅವರು ಸುಕನ್ಯಾ ಮತ್ತು ಶ್ರೀಧರ್ ಶೆಟ್ಟಿ ಅವರ ಪುತ್ರ. ಇವರು ಸುರತ್ಕಲ್ ಮೂಲದವರು. 2006ರಲ್ಲಿ ಕೋಕ್‌ ಮತ್ತು 2009ರಲ್ಲಿ MRF ಟೈಯರ್‌ ಜಾಹೀರಾತಿನ ಮೂಲಕ ಗ್ಲಾಮರ್ ಲೋಕಕ್ಕೆ ಕಾಲಿಟ್ಟರು. 2007 ರಲ್ಲಿ ಮಿಸ್ಟರ್ ಮಂಗಳೂರು ಪ್ರಶಸ್ತಿ ಮತ್ತು 2012 ರಲ್ಲಿ ಮಾಡೆಲ್ ಹಂಟ್ ಸ್ಪರ್ಧೆಯಲ್ಲಿ ಗೆದ್ದರು.

LEAVE A REPLY

Please enter your comment!
Please enter your name here