ಮಂಜೇಶ್ವರ: ನೋ ಎಂಟ್ರಿಯಲ್ಲಿ ನುಗ್ಗಿ ಕಾಮಗಾರಿ ನಡೆಯುತ್ತಿದ್ದ ಗುಂಡಿಗೆ ಬಿದ್ದ ಕಾರು – ಕಾರಿನಲ್ಲಿ ಅಕ್ರಮ ಮದ್ಯ ಸಾಗಾಟ ಪತ್ತೆ

Prakhara News
1 Min Read

ಮಂಜೇಶ್ವರ: ಉಪ್ಪಳದಲ್ಲಿ ಕಾಮಗಾರಿ ನಡೆಯುತ್ತಿದ್ದ ರಸ್ತೆಯಲ್ಲಿ ಕರ್ನಾಟಕ ಮದ್ಯ ತುಂಬಿದ ಕಾರು ಒಂದು ಗುಂಡಿಗೆ ಬಿದ್ದಿದ್ದು ಸರಿ ಸುಮಾರು 30 ಬಾಕ್ಸ್ ಕರ್ನಾಟಕ ಮದ್ಯ ಕಾರಿನಲ್ಲಿ ಬಚ್ಚಿಡಲಾದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ.ನಿನ್ನೆ ರಾತ್ರಿ 9.20 ರ ಸಮಯದಲ್ಲಿ ಕಾಮಗಾರಿ ನಡೆಯುತ್ತಿದ್ದ ವೇಳೆ ರಸ್ತೆಯನ್ನು ಒಂದು ತಿಂಗಳು ಮುಚ್ಚಲಾಗಿತ್ತು.

ಈ ವೇಳೆ “ನೋ ಎಂಟ್ರಿ” ಬೋರ್ಡ್ ಅಳವಡಿಸಲಾಗಿತ್ತು. ಇದನ್ನು ಮೀರಿ ಮದ್ಯ ತುಂಬಿದ ಕಾರು ಈ ರಸ್ತೆ ಯಲ್ಲಿ ಸಾಗಿದೆ. ಉಪ್ಪಳ ಗೇಟ್ ಬಳಿ ಅಪಘಾತ ಸಂಭವಿಸಿದೆ. ಊರಿನವರ ಸಹಾಯದಿಂದ ಡ್ರೈವರ್ ನನ್ನು ಮೇಲೆತ್ತಲಾಯಿತು.

ತಕ್ಷಣ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿ ಕ್ರೇನ್ ಬಳಸಿ ಕಾರು ಹಾಗೂ ಡ್ರೈವರ್ ಮೀಯಪದವು ಮೂಲದ ಕುಳೂರು ಚಿನಾಲ ಚಂದ್ರಹಾಸ ರವರ ಪುತ್ರ ಪ್ರಜ್ವಲ್ (28) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂದಿನ ತನಿಖೆ ಕೈಗೊಂಡಿದ್ದಾರೆ.

Share This Article
Leave a Comment