ಮಂಗಳೂರಿನ ಯೆಯ್ಯಾಡಿ ಶರ್ಬತ್ಕಟ್ಟೆಯಲ್ಲಿರುವ ಶ್ರೀವೇದಂ ಆಯು ಮಲ್ಟಿ ಸ್ಪೆಷಾಲಿಟಿ ಆಯುರ್ವೇದ ಆಸ್ಪತ್ರೆಯಲ್ಲಿ ಧನ್ವಂತರಿ ಜಯಂತಿಯ ಪ್ರಯುಕ್ತ ಉಚಿತ ಆಯುರ್ವೇದ ಆರೋಗ್ಯ ತಪಾಸಣೆ ಶಿಬಿರವು ಇಂದು ಬೆಳ್ಳಿಗೆ 9 ಗಂಟೆಗೆ ಉದ್ಘಾಟನೆಗೊಂಡಿತು.
ಶಿಬಿರದ ಉದ್ಘಾಟನೆಯನ್ನು ಪಿ. ಎಸ್ ಪ್ರಕಾಶ್, ಸಿಇಒ ಹೊಸದಿಂಗಂತ, ಆರ್ ಎಸ್ ಎಸ್ ಕರ್ನಾಟಕ ರಾಜ್ಯ ದಕ್ಷಿಣ ಪ್ರಾಂತ ಸಹ ಕಾರ್ಯವಾಹರು ನೇರವೆರಿಸಿದರು. ವಿಶ್ವೇಶ್ವರ ಭಟ್ (ಎಜಿಎಂ ಕರ್ನಾಟಕ ಬ್ಯಾಂಕ್) ರವರು ಹೆಲ್ತ್ ಕಾರ್ಡ್ ಬಿಡಗಡೆಗೂಳಿಸಿದರು. ಮುಖ್ಯ ಅಥಿತಿಗಳಾಗಿ ಡಾ.ಕಿಶನ್ ರಾವ್ ಬಾಳಿಲ, ಡಾ.ಮುರಳಿ ಮೋಹನ್ ಚೂಂತಾರು, ಪುರಷೋತ್ತಮ ದೇವಸ್ಯ ಉಪಸ್ಥಿತರಿದ್ದರು.
ಪಿ. ಎಸ್ ಪ್ರಕಾಶ್, ಸಿಇಒ ಹೊಸದಿಂಗಂತ, ಆರ್ ಎಸ್ ಎಸ್ ಕರ್ನಾಟಕ ರಾಜ್ಯ ದಕ್ಷಿಣ ಪ್ರಾಂತ ಸಹ ಕಾರ್ಯವಾಹರಾದ ಪಿ. ಎಸ್. ಪ್ರಕಾಶ್ ಮಾತಾನಾಡಿ ಆರೋಗ್ಯಕಾರ ಜೀವನಗಾಗಿ ಬದುಕಿನ ಬಹಳ ಸರಳ ಸೂತ್ರಗಳಾದ ಆಹಾರ, ಆರೋಗ್ಯ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಅರ್ಥಪೂರ್ಣವಾಗಿ ವಿವರಿಸಿದರು.
ಈ ಉಚಿತ ಆಯುರ್ವೇದ ಆರೋಗ್ಯ ತಪಾಸಣೆ ಶಿಬಿರ ನ. 10, 11ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1.30ರ ವರೆಗೆ ಹಾಗೂ 3ರಿಂದ 8 ಗಂಟೆಯ ವರೆಗೆ ನಡೆಯಲಿದೆ. ಶಿಬಿರದಲ್ಲಿ ರಕ್ತದೊತ್ತಡ ಪರೀಕ್ಷೆ , ರಕ್ತದ ಸಕ್ಕರೆ ಪರೀಕ್ಷೆ , ನಾಡಿ ಪರೀಕ್ಷೆ, ಔಷಧಗಳಿಗೆ ಶೇ.5 ರಿಯಾಯಿತಿ, ಎಲ್ಲ ರೀತಿಯ ಚಿಕಿತ್ಸೆಗೆ ಶೇ.5 ರಿಯಾಯಿತಿ ಹಾಗೂ ಉಚಿತ ಬಿಎಂಡಿ ಟೆಸ್ಟ್ ಮಾಡಲಾಗುವುದು ಎಂದು ಶ್ರೀ ವೇದಂ ಆಯು ಮಲ್ಟಿ ಸ್ಪೆಷಾಲಿಟಿ ಆಯುರ್ವೇದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ| ಕೇಶವ ರಾಜ್ ತಿಳಿಸಿದ್ದರು.