ಮಂಗಳೂರು: 68 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮಂಗಳೂರು ನಗರ ಪೊಲೀಸ್ ಕೇಂದ್ರ ಉಪವಿಭಾಗ ವತಿಯಿಂದ ನಗರದ ಪುರಭವನದಲ್ಲಿ ನವಂಬರ್ 1 ರಂದು ಆರಕ್ಷಕರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗ್ರವಾಲ್ , ಐ ಪಿ ಎಸ್ ನಡೆಸಿದರು. ಮುಖ್ಯ ಅತಿಥಗಳಾಗಿ ಉಪ ಪೊಲೀಸ್ ಆಯುಕ್ತರುಗಳಾದ ಶ್ರೀ ಸಿದ್ದಾರ್ಥ ಗೋಯಲ್ ಹಾಗೂ ಶ್ರೀ ದಿನೇಶ್ ಕುಮಾರ್ ಬಿ.ಪಿ ಭಾಗವಹಿಸಿದರು. ಈ ಸಂಧರ್ಭದಲ್ಲಿ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಮಿಸ್ ಟೀನ್ ಕರ್ನಾಟಕ ಸೌಂದರ್ಯ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಪ್ರಶಸ್ತಿ ಪಡೆದ ಮಂಗಳೂರು ನಗರ ಪೊಲೀಸ್ ಸಿಬ್ಬಂದಿ ಶರತ್ ಶೆಟ್ಟಿಯವರ ಪುತ್ರಿ ಕುಮಾರಿ ಈಶಿಕಾ ಶೆಟ್ಟಿಯವರಿಗೆ ಪೊಲೀಸ್ ಇಲಾಖೆ ವತಿಯಿಂದ ಸನ್ಮಾನ ಮಾಡಲಾಯಿತು.