Home ತಾಜಾ ಸುದ್ದಿ ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ – ಟಾಟಾ ಸುಮೋ ಡಿಕ್ಕಿ ಹೊಡೆದು ಮಗು ಸಹಿತ 13 ಮಂದಿ...

ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ – ಟಾಟಾ ಸುಮೋ ಡಿಕ್ಕಿ ಹೊಡೆದು ಮಗು ಸಹಿತ 13 ಮಂದಿ ಮೃತ್ಯು

0

ಚಿಕ್ಕಬಳ್ಳಾಪುರ: ಸಿಮೆಂಟ್ ಬಲ್ಕರ್ ಗೆ ಟಾಟಾ ಸುಮೋ ಢಿಕ್ಕಿ ಹೊಡೆದು 13 ಜನ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44 ರ ಚಿತ್ರಾವತಿ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ. ಅಪಘಾತವು 7 ಗಂಟೆ ಸುಮಾರಿಗೆ ನಡೆದಿದೆ.

ಟಾಟಾ ಸುಮೋ ಆಂಧ್ರಪ್ರದೇಶದಿಂದ ಬೆಂಗಳೂರಿನತ್ತ ತೆರಳುವ ವೇಳೆ ಘಟನೆ ನಡೆದಿದ್ದು ಟಾಟಾ ಸುಮೋದಲ್ಲಿದ್ದ ಎಲ್ಲ 13 ಮಂದಿ ಮೃತಪಟ್ಟಿದ್ದಾರೆ. ಒಂದು ಮಗು, ಮೂವರು ಮಹಿಳೆಯರು ಹಾಗೂ ಎಂಟು ಮಂದಿ ಪುರುಷರು ಮೃತಪಟ್ಟವರು. ಇವರ ಪೈಕಿ 6 ಮಂದಿಯ ಗುರುತು ಪತ್ತೆಯಾಗಿದೆ.

ದೊಡ್ಡಬಳ್ಳಾಪುರದ ತಾಯಿ ಅರುಣಾ, ಮಗ ಋತ್ವಿಕ್, ಆಂಧ್ರಪ್ರದೇಶದ ಕೊತ್ತಚೆರುವಿನ ಪೆರುಮಾಳ್ ಪವನ್ ಕುಮಾರ್‌, ಬೆಂಗಳೂರಿನ ಕಾಮಾಕ್ಷಿಪಾಳ್ಯದ ಸುಬ್ಬಮ್ಮ, ಬಾಗೇಪಲ್ಲಿ ತಾಲ್ಲೂಕಿನ ಮಾರ್ಗಾನುಕುಂಟೆಯ ನರಸಿಂಹಮೂರ್ತಿ, ಟಾಟಾ ಸುಮೊ ಚಾಲಕ ಆಂಧ್ರಪ್ರದೇಶದ ಕಲಿಗೆರೆಯ ನರಸಿಂಹಪ್ಪ ಮೃತರು.

ಇನ್ನು 7 ಮಂದಿಯ ಗುರುತು ಪತ್ತೆಯಾಗಬೇಕಿದೆ. ಘಟನೆಯಲ್ಲಿ 3 ಜನರಿಗೆ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ

LEAVE A REPLY

Please enter your comment!
Please enter your name here