ಮಂಗಳೂರು : ಅಳತೆ ತೆಗೆಯುತ್ತಿರುವಾಗ ಏಕಾಏಕಿ ಜರಿದ ಧರೆ, ಮಣ್ಣಿನಡಿಗೆ ಸಿಲುಕಿ ಕಂಟ್ರಾಕ್ಟರ್ ದುರ್ಮರಣ.

Prakhara News
1 Min Read

ಮಂಗಳೂರು : ನಗರದ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಕುಂಟಿಕಾನ ಸಮೀಪದ ಲೋಹಿತ್ ನಗರದಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ಧರೆ ಜರಿತ ದುರಂತದಲ್ಲಿ ಕಂಟ್ರಾಕ್ಟರ್ ಒಬ್ಬರು ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಉರ್ವ ಅಶೋಕನಗರ ನಿವಾಸಿ ಆಂಟನಿ ಮಸ್ಕರೇನಸ್ (65) ಎಂದು ಗುರುತಿಸಲಾಗಿದೆ.

ಮೇ 21ರಂದು ಸುಮಾರು ಮಧ್ಯಾಹ್ನ 1:30ರ ವೇಳೆಗೆ ಮನೆಯೊಂದರ ಹಿಂಭಾಗದಲ್ಲಿ ಆವರಣ ಗೋಡೆ ನಿರ್ಮಾಣಕ್ಕೆ ಅಳತೆ ಮಾಡುವ ಕಾರ್ಯ ನಡೆಯುತ್ತಿತ್ತು. ಮಳೆಗಾಲದಲ್ಲಿ ಧರೆ ಜರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಆವರಣ ಗೋಡೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು ಎನ್ನಲಾಗಿದೆ.

ಗುತ್ತಿಗೆ ವಹಿಸಿಕೊಂಡಿದ್ದ ಆಂಟನಿ ಮಸ್ಕರೇನಸ್ ಅವರು ಇತರೆ ನಾಲ್ವರು ಕಾರ್ಮಿಕರೊಂದಿಗೆ ಸ್ಥಳಕ್ಕೆ ತೆರಳಿ ಅಳತೆ ಮಾಡುತ್ತಿರುವಾಗ ಏಕಾಏಕಿ ಧರೆ ಜರಿದು ಮಣ್ಣು ಅವರ ಮೇಲೆಗೆ ಬಿದ್ದಿದೆ. ತಕ್ಷಣ ಸ್ಥಳೀಯರು ಹಾಗೂ ಸಿಬ್ಬಂದಿಗಳು ಮಣ್ಣು ತೆರವುಗೊಳಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಕದ್ರಿ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು ಭೇಟಿ ನೀಡಿ ಮಣ್ಣು ತೆರವು ಕಾರ್ಯಾಚರಣೆ ನಡೆಸಿದರು.

ಈ ಸಂಬಂಧ ಕಾವೂರು ಪೊಲೀಸ್ ಠಾಣೆ ಯಲ್ಲಿ ಯುಡಿಆರ್ ಪ್ರಕರಣ ದಾಖಲು ಪ್ರಕ್ರಿಯೆ ನಡೆಯುತ್ತಿದೆ.

Share This Article
Leave a Comment