Home ಕರಾವಳಿ ಬಂಟ್ವಾಳ :KSRTC ಬಸ್ ನ ಪುಟ್ ಬೋರ್ಡಿನಲ್ಲಿ ನೇತಾಡಿಕೊಂಡು ಹೋಗುವ ಶಾಲಾ ಮಕ್ಕಳು – ವಿಡಿಯೋ...

ಬಂಟ್ವಾಳ :KSRTC ಬಸ್ ನ ಪುಟ್ ಬೋರ್ಡಿನಲ್ಲಿ ನೇತಾಡಿಕೊಂಡು ಹೋಗುವ ಶಾಲಾ ಮಕ್ಕಳು – ವಿಡಿಯೋ ವೈರಲ್..!

0

ಬಂಟ್ವಾಳ: ಶಾಲಾ ಮಕ್ಕಳು ಬಸ್ ನ ಪುಟ್ ಬೋರ್ಡಿನಲ್ಲಿ ನೇತಾಡಿಕೊಂಡು ಹೋಗುವ ಭಯಾನಕ ವಿಡಿಯೋ ಬಂಟ್ವಾಳದಿಂದ ವೈರಲ್ ಆಗಿದೆ. “ಶಾಲಾಮಕ್ಕಳ ಭವಿಷ್ಯ ಯಾರ ಕೈಯಲ್ಲಿ” ಎಂಬ ತಲೆಬರಹದ ಜೊತೆ ವಿಡಿಯೋ ವೈರಲ್ ಆಗಿದೆ.


ಬಿಸಿರೋಡು ವಿಟ್ಲ ಎಂಬ ಬೋರ್ಡ್ ಬಸ್ ನಲ್ಲಿ ಕಂಡು ಬಂದಿದೆ. ಮುಂಭಾಗದಲ್ಲಿ ಮತ್ತು ಹಿಂಭಾಗದ ಎರಡು ಪುಟ್ ಬೋರ್ಡಿನಲ್ಲಿ ಬ್ಯಾಗ್ ಹಾಕಿಕೊಂಡು ವಿದ್ಯಾರ್ಥಿಗಳು ನೇತಾಡುವ ದೃಶ್ಯ ಕಂಡು ಬಂದಿದೆ.

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಘಟನೆ ಮಾಸುವ ಮುನ್ನವೇ ಇಂತಹ ವಿಡಿಯೋ ಗಳು ವೈರಲ್ ಆಗಿರುವುದು ಮಕ್ಕಳ ಪೋಷಕರಿಗೆ ಹೆದರಿಕೆ ಉಂಟು ಮಾಡಿದೆ.‌ ಪುಟ್ ಬೋರ್ಡಿನಿಂದ  ಬಸ್ ಕಂಡಕ್ಟರ್ ಓರ್ವ ಕೈ ತಪ್ಪಿ ನೆಲಕ್ಕುರುಳಿ ಮೃತಪಟ್ಟ ವಿಡಿಯೋ ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿತ್ತು.

ಅ ಬಳಿಕ ಅಧಿಕಾರಿಗಳು ಎಚ್ಚರಿಕೆ ನೀಡುವ ಕೆಲಸ ಮಾಡಲಾಯಿತಾದರೂ ಗ್ರಾಮೀಣ ಭಾಗದ ಕೆಲವು ಕಡೆಗಳಲ್ಲಿ ಇಂತಹ ಪ್ರಕರಣಗಳು ಕಂಡು ಬರುತ್ತಿರುವುದು ಬೇಸರದ ವಿಚಾರ. ಶಾಲಾ ಮಕ್ಕಳಿಗೆ ಬೆಳಿಗ್ಗೆ ಮತ್ತು ಸಂಜೆ ಅವಧಿಯಲ್ಲಿ ಪ್ರಯಾಣಿಸಲು ಸಾಕಷ್ಟು ಬಸ್ ಗಳಿಲ್ಲದೆ ತೊಂದರೆಯಾಗುತ್ತಿದೆ.

ಹಾಗಾಗಿ ಅನಿವಾರ್ಯ ವಾಗಿ ಮಕ್ಕಳು ನೇತಾಡಿಕೊಂಡು ಹೋಗುತ್ತಿದ್ದಾರೆ.ಈಸಮಸ್ಯೆ ಪರಿಹಾರಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುತುವರ್ಜಿ ವಹಿಸಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.

LEAVE A REPLY

Please enter your comment!
Please enter your name here