Home ತಾಜಾ ಸುದ್ದಿ ಸೆ.26ರಂದು ‘ಬೆಂಗಳೂರು ಬಂದ್’: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ

ಸೆ.26ರಂದು ‘ಬೆಂಗಳೂರು ಬಂದ್’: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ

0

ಬೆಂಗಳೂರು: ಕರ್ನಾಟಕ ಜಲ ಸಂರಕ್ಷಣಾ ಸಮಿತಿಯಿಂದ ಸೆಪ್ಟೆಂಬರ್.26ರ ಮಂಗಳವಾರದಂದು ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರೋದನ್ನ ವಿರೋಧಿಸಿ ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ. ಅಂದು ಬಹುತೇಕ ಬೆಂಗಳೂರು ಸ್ಥಬ್ಧಗೊಳ್ಳೋ ಸಾಧ್ಯತೆ ಇದೆ. ಹಾಗಾದ್ರೇ ಬೆಂಗಳೂರು ಬಂದ್ ವೇಳೆಯಲ್ಲಿ ಏನಿರುತ್ತೆ?


ಏನಿರಲ್ಲ ಅಂತ ಮುಂದೆ ಓದಿ.

ಇಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವಂತ ರೈತರ ಕಾವೇರಿ ನೀರು ಬಿಡುಗಡೆ ವಿರೋಧಿಸಿದ ಪ್ರತಿಭಟನೆಯಲ್ಲಿ ಮಾತನಾಡಿದಂತ ಅವರು, ರಾಜ್ಯ ಸರ್ಕಾರ ಪದೇ ಪದೇ ಕಾವೇರಿ ನೀರು ಬಿಡೋದಿಲ್ಲ ಅಂತ ಹೇಳಿ, ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ. ಇದನ್ನು ನಿಲ್ಲಿಸಬೇಕು ಅಂತ ಒತ್ತಾಯಿಸಿದರು.

ರಾಜ್ಯದ ರೈತರಿಗೆ ಕುಡಿಯೋದಕ್ಕೆ ನೀರಿಲ್ಲ. ಬೆಂಗಳೂರು ಜನತೆಗೂ ಕಾವೇರಿ ನೀರು ಸಮಸ್ಯೆ ಆಗಲಿದೆ. ಹೀಗಿದ್ದೂ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರೋದು ಸರಿಯಲ್ಲ. ರಾಜ್ಯ ಸರ್ಕಾರ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದು, ತಮಿಳುನಾಡಿಗೆ ನೀರು ಬಿಡದಂತ ನಿರ್ಣಯವನ್ನು ಕೈಗೊಳ್ಳಬೇಕು ಅಂತ ಆಗ್ರಹಿಸಿದರು.

ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸೋದನ್ನು ಖಂಡಿಸಿ ಸೆಪ್ಟೆಂಬರ್ 26ರ ಮಂಗಳವಾರದಂದು ಬೆಂಗಳೂರು ಬಂದ್ ನಡೆಸಲಾಗುತ್ತದೆ. ಅಂದು ಶಾಲಾ-ಕಾಲೇಜುಗಳು ಮಕ್ಕಳಿಗೆ ತೊಂದರೆಯಾಗದಂತೆ ರಜೆ ನೀಡಬೇಕು. ಬೆಂಗಳೂರು ಜನತೆ ಸ್ವಯಂ ಪ್ರೇರಿತವಾಗಿ ಬಂದ್ ನಲ್ಲಿ ಭಾಗವಹಿಸಬೇಕು. ಇದು ಕಾವೇರಿ ಹೋರಾಟದ ಪ್ರತಿಭಟನೆಯಂತ ತಿಳಿಯಬಾರದು. ಬೆಂಗಳೂರು ಜನತೆ ನೀರಿನ ಹೋರಾಟ ಅಂತ ತಿಳಿಯಬೇಕು ಎಂದು ಹೇಳಿದರು.

ಬೆಂಗಳೂರು ಬಂದ್ ವೇಳೆ ಏನಿರುತ್ತೆ.? ಏನಿರಲ್ಲ.?

ಈ ಹಿನ್ನಲೆಯಲ್ಲಿ ಸೆ.26ರ ಮಂಗಳವಾರದಂದು ಬೆಂಗಳೂರು ಬಂದ್ ಗೆ 150ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಲಿದ್ದಾವೆ. ಹೀಗಾಗಿ ಬೆಂಗಳೂರು ನಗರ ಸಂಪೂರ್ಣ ಬಂದ್ ಆಗೋ ಸಾಧ್ಯತೆ ಇದೆ. ಈ ವೇಳೆಯಲ್ಲಿ ತುರ್ತು ಸೇವೆ ಒದಗಿಸುವಂತ ಮೆಡಿಕಲ್, ಹಾಲಿನ ಬೂತ್, ಆಸ್ಪತ್ರೆಗಳು ಎಂದಿನಂತೆ ಓಪನ್ ಇರಲಿದ್ದಾವೆ.

ಇನ್ನೂ ಬೆಂಗಳೂರು ಬಂದ್ ಸಂದರ್ಭದಲ್ಲಿ ಬಿಎಂಟಿಸಿ ಬಸ್ ಸಂಚಾರ ನಡೆಸೋದು ಡೌಟ್. ಕೆ ಎಸ್ ಆರ್ ಟಿಸಿ ಬಸ್ ಸಂಚಾರವೂ ಸ್ಥಗಿತಗೊಳ್ಳೋ ಸಾಧ್ಯತೆ ಇದೆ.

ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಲಿದ್ದಾವೆ. ಖಾಸಗಿ ಬಸ್, ಆಟೋ, ಟ್ಯಾಕ್ಸಿ ಸಂಚಾರ ಸ್ಥಗಿತಗೊಳ್ಳೋ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here