ಮಂಗಳೂರು: ಕನ್ನಡ ಚಿತ್ರರಂಗದಲ್ಲಿ ಕನಸಿನ ರಾಣಿಯಾಗಿ ಚಿತ್ರರಸಿಕರ ಮನ ಗೆದ್ದಿರುವ ಆಕ್ಷನ್ ಕ್ಲೀನ್ ಮಾಲಾಶ್ರೀ ಅಭಿನಯದ ಮತ್ತೊಂದು ಆಕ್ಷನ್ ಚಿತ್ರ ಮಾರಕಾಸ್ತ್ರ ತೆರೆಗೆ ಬರಲು ಸಿದ್ಧವಾಗಿದೆ.
ಈ ಚಿತ್ರದಲ್ಲಿ ಮಾಲಾಶೀ ಔಟ್ ಅಂಡ್ ಔಟ್ ಅಕ್ಷನ್ ಲುಕ್ ನಲ್ಲಿ ಕಾಣಿಸಿಕೊಂಡಿರುವುದು ಚಿತ್ರರಸಿಕರಲ್ಲಿ ನಿರೀಕ್ಷೆಯನ್ನು ಮೂಡಿಸಿದೆ. ಚಿತ್ರದ ನಾಯಕನಾಗಿ ‘ಆನಂದ್ ಆರ್ಯ, ನಾಯಕಿಯಾಗಿ ಹರ್ಷಿಕಾ ಪುಣಚ್ಚಾ, ಅಯ್ಯಪ್ಪ ಶರ್ಮಾ,ಮೈಕೋ ನಾಗರಾಜ್, ಉಗ್ರಂ ಮಂಜು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸುಮಾರು ಹಿರಿಯ, ಕಿರಿಯ ಕಲಾವಿದರು ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಗುರುಮೂರ್ತಿ ಸುನಾಮಿ ನಿರ್ದೇಶಿಸಿದ್ದಾರೆ. ನೃತ್ಯ ನಿರ್ದೇಶಕ ಮತ್ತು ನಿರ್ದೇಶಕ ರಾಗಿರುವ ಧನು ಕುಮಾರ್ ಕ್ರಿಯೇಟಿವ್ ಹೆಡ್ ಆಗಿದ್ದಾರೆ.
ಗಾಯನದಲ್ಲಿ ಅತೀವ ಆಸಕ್ತಿ ಹೊಂದಿ, ಸ್ವತ: ಗಾಯಕರಾಗಿರುವ ಡಾ| ನಟರಾಜ ಈ ಚಿತ್ರದಲ್ಲಿ ಹಾಡು ಹಾಡುವುದರೊಂದಿಗೆ ನಟನೆ ಮಾಡಿದ್ದಾರೆ. ಕೋಮಲ ನಟರಾಜ ನಿರ್ಮಾಪಕರಾಗಿದ್ದು ಮಂಜುನಾಥ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
‘ಮಾರಕಾಸ್ತ್ರ’ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ಗುರುಮೂರ್ತಿ ಸುನಾಮಿ, ‘ನಾನು ಮೂಲತಃ ಬಳ್ಳಾರಿಯವನು. ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲೇ ಮಾಲಾಶ್ರೀ ಅವರಿಗೆ ನಿರ್ದೇಶನ ಮಾಡುತ್ತೇನೆ ಎಂದುಕೊಂಡಿರಲಿಲ್ಲ. ‘ಮಾರಕಾಸ್ತ್ರ’ ಒಂದು ಕೌಟುಂಬಿಕ ಚಿತ್ರ. ಇದರಲ್ಲಿ ಆ್ಯಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲ ಅಂಶಗಳೂ ಇವೆ. ಕೋಮಲಾ ನಟರಾಜ್ ಈ ಸಿನಿಮಾಕ್ಕೆ ಹಣ ಹಾಕಿದ್ದಾರೆ.
ಪುನೀತ್ರನ್ನೇ ಹೋಲುತ್ತಾರೆ ಈ ನಾಯಕ ನಟ ‘ಆನಂದ್ ಆರ್ಯ
ಸಿನಿಮಾದ ಟೈಟಲ್ ‘ದೇಶದ ರಕ್ಷಣೆಗಾಗಿ’ ಎಂದು. ಇದನ್ನು ಕೇಳಿ ಸಿನಿಮಾ ಒಪ್ಪಿಕೊಂಡೆ. ಇದರ ಕುರಿತು ಮತ್ತಷ್ಟು ಹೇಳುವುದಾದರೆ ಇದು ಡಿಟೆಕ್ಟಿವ್ ಪಾತ್ರ. ಹಾಡುಗಳು, ಸಾಹಿತ್ಯ ಎಲ್ಲವೂ ಬಹಳ ಅದ್ಭುತವಾಗಿ ಮೂಡಿಬಂದಿದೆ.