ಶಾಲಾ ಬಸ್ವೊಂದರಲ್ಲಿ ವಿದ್ಯಾರ್ಥಿಯೊಬ್ಬ 6 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಆರೋಪಿ ಸಿಕ್ಕಿಬಿದ್ದಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲಕಿಯ ತಂದೆ, ತನ್ನ ಲಿಖಿತ ದೂರಿನಲ್ಲಿ, ತನ್ನ ಮಗಳಿಗೆ ಶಾಲಾ ಬಸ್‌ನಲ್ಲಿ ಹುಡುಗನೊಬ್ಬ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ ಎಂದು ಅಧಿಕಾರಿ ಹೇಳಿದರು. ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಐಪಿಸಿಯ ಸೆಕ್ಷನ್ 354 ಮತ್ತು 228A ಮತ್ತು POCSO ಕಾಯಿದೆಯ 10/21 ರ ಅಡಿಯಲ್ಲಿ ಪ್ರಕರಣವನ್ನು ಬೇಗಂಪುರ ಪೊಲೀಸ್‌ನಲ್ಲಿ ದಾಖಲಿಸಲಾಗಿದೆ. ಬಾಲಕಿಯು ದೆಹಲಿಯ ಬೇಗಂಪುರ ಪ್ರದೇಶದ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಆಗಸ್ಟ್ 23 ರಂದು ಮಗಳನ್ನು ಎಂದಿನಂತೆ ಬಸ್ನಿಂದ ತಾಯಿ ಕೆಳಗಿಳಿಸಿಕೊಂಡಿದ್ದರು. ಮೂತ್ರ ವಿಸರ್ಜನೆಯಿಂದ ಬಟ್ಟೆ ಹಾಗೂ ಬ್ಯಾಗ್ ಎಲ್ಲಾ ಒದ್ದೆಯಾಗಿತ್ತು. ವಿಚಾರಣೆ ವೇಳೆ ಹಿರಿಯ ವಿದ್ಯಾರ್ಥಿಯೊಬ್ಬ ಬಸ್‌ನಲ್ಲಿ ಕಿರುಕುಳ ನೀಡಿರುವುದಾಗಿ ತಿಳಿಸಿದ್ದಾಳೆ.