ತುಮಕೂರು ಮದರಸಾದಲ್ಲಿ 24 ಮಕ್ಕಳಿಗೆ ಕಿರುಕುಳ ಆರೋಪ : ಧರ್ಮಗುರುವಿನ ವಿರುದ್ಧ ಎಫ್‌ಐಆರ್ ದಾಖಲು.!

Prakhara News
1 Min Read

ತುಮಕೂರು : ತುಮಕೂರಿನ ಮದರಸಾದಿಂದ ಧರ್ಮಗುರುವೊಬ್ಬರು ಕಿರುಕುಳ ಮತ್ತು ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಪಲಾಯನಗೈದ ಬಿಹಾರದ ಇಪ್ಪತ್ತನಾಲ್ಕು ಮಕ್ಕಳನ್ನು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ರಕ್ಷಿಸಲಾಗಿದೆ.

ತುಮಕೂರಿನ ಆಮ್ಲಾಪುರದಲ್ಲಿರುವ ಜಾಮಿಯಾ ಅರೇಬಿಯಾ ಹಸಿನಿಯಾ ಟ್ರಸ್ಟ್‌ನಲ್ಲಿ ಈ ಘಟನೆ ನಡೆದಿದೆ. ರೈಲ್ವೆ ರಕ್ಷಣಾ ಪಡೆ ಬೆಂಗಳೂರು ನಿಲ್ದಾಣದಲ್ಲಿ ಮಕ್ಕಳನ್ನು ಪತ್ತೆ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದೆ.

ಮಕ್ಕಳ ಕಲ್ಯಾಣ ಸಮಿತಿಯ ದೂರಿನ ಪ್ರಕಾರ, ಮದರಸಾ ಧರ್ಮಗುರು ಮೌಲಾಲಿ ಮಕ್ಕಳ ಮೇಲೆ ಕಲ್ಲು ಎಸೆದಿದ್ದಾರೆ, ಕೆಲಸ ಮಾಡಲು ನಿರಾಕರಿಸಿದರೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಮತ್ತು ಅವರಿಗೆ ಆಹಾರವನ್ನು ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕಿರುಕುಳದಿಂದಾಗಿ ಮಕ್ಕಳು ಮದರಸಾದಿಂದ ಓಡಿಹೋದರು ಎಂದು ವರದಿಯಾಗಿದೆ.

ಸಿಡಬ್ಲ್ಯೂಸಿ ದೂರಿನ ಆಧಾರದ ಮೇಲೆ, ಪ್ರಕರಣವನ್ನು ತುಮಕೂರಿಗೆ ವರ್ಗಾಯಿಸಲಾಯಿತು.ತುಮಕೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಧರ್ಮಗುರುವಿನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.‌ ಬಾಲ ನ್ಯಾಯ ಕಾಯ್ದೆ ಮತ್ತು ಬಾಲ ಕಾರ್ಮಿಕ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತುಮಕೂರು ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ

Share This Article
Leave a Comment