ವಿಟ್ಲ: ಪರಿಶಿಷ್ಟ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿಧ್ಯಾರ್ಥಿ ನಿಲಯದಿಂದ ಇಬ್ಬರು ವಿಧ್ಯಾರ್ಥಿಗಳು ನಾಪತ್ತೆಯಾಗಿರುವ ಘಟನೆ ನಡೆದಿದ್ದು, ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ವಿಧ್ಯಾರ್ಥಿಗಳನ್ನು ದೀಕ್ಷೀತ್(15) ಮತ್ತು ಗಗನ್(14) ಎಂದು ಗುರುತಿಸಲಾಗಿದೆ. ಇವರಿಬ್ಬರು ಅಗಸ್ಟ್ 21ರಂದು ಬೆಳಗ್ಗೆ ಶಾಲೆಗೆಂದು ವಿದ್ಯಾರ್ಥಿ ನಿಲಯದಿಂದ ತೆರಳಿದವರು ಶಾಲೆಗೂ ಹೋಗದೇ ವಾಪಸ್ ವಿದ್ಯಾರ್ಥಿ ನಿಲಯಕ್ಕೂ ಬಾರದೆ ನಾಪತ್ತೆಯಾಗಿದ್ದಾರೆ. ಸಂಜೆ ಇದು ಬೆಳಕಿಗೆ ಬಂದಿದೆ ಎಂದು ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಪ್ರಮೀಳಾ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಕಾಣೆಯಾದ ದೀಕ್ಷೀತ್ ಹಾಗೂ ಗಗನ್ ತಮ್ಮ ಮನೆಗೂ ತೆರಳಲಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.