Home ಕರಾವಳಿ ಮಂಗಳೂರು: ಬಂದರಿನಲ್ಲಿ ನದಿಗೆ ಬಿದ್ದು ಮೀನುಗಾರ ಸಾವು..!

ಮಂಗಳೂರು: ಬಂದರಿನಲ್ಲಿ ನದಿಗೆ ಬಿದ್ದು ಮೀನುಗಾರ ಸಾವು..!

0

ಮಂಗಳೂರು: ನಗರದ ಬಂದರ್‌ನ ಧಕ್ಕೆಯ ಬಳಿ ಮೀನುಗಾರಿಕೆಗೆಂದು ಬಂದಿದ್ದ ಮೀನುಗಾರನೊಬ್ಬನು ಕಾಲುಜಾರಿ ನದಿಗೆ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಸಂಜೆ ವೇಳೆ ನಡೆದಿದೆ. ಉಳ್ಳಾಲ ನಿವಾಸಿ ಮುಝಮ್ಮಿಲ್(32) ಮೃತಪಟ್ಟ ಯುವಕ. ಮಂಗಳವಾರ ಸಂಜೆ 5ಗಂಟೆ ವೇಳೆಗೆ ಮುಝಮ್ಮಿಲ್ ಮೀನುಗಾರಿಕಾ ಜೆಟ್ಟಿ ಬಳಿ ನಿಂತಿದ್ದರು‌. ಈ ವೇಳೆ ಅವರು ಆಕಸ್ಮಿಕವಾಗಿ ಕಾಲು ಜಾರಿ ಫಲ್ಗುಣಿ ನದಿಗೆ ಬಿದ್ದಿದ್ದಾರೆ‌. ತಕ್ಷಣ ಅಲ್ಲಿಯೇ ಇದ್ದ ಇತರ ಮೀನುಗಾರರು ಅವರನ್ನು ರಕ್ಷಿಸಲು ಯತ್ನಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


LEAVE A REPLY

Please enter your comment!
Please enter your name here