ಸುರತ್ಕಲ್: ಮೃತಪಟ್ಟ ಘಟನೆ ಸುರತ್ಕಲ್ ಸಮೀಪದ ಕುಳಾಯಿಯಲ್ಲಿ ನಡೆದಿದೆ.
ಮೃತ ಪಟ್ಟ ಯುವಕನನ್ನು ಸ್ಥಳೀಯ ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದೆ. ಮಂಗಳವಾರ ತಡರಾತ್ರಿ ಸಮುದ್ರ ತೀರದಲ್ಲಿ ಇದ್ದ ಭಾರಿ ಸುಂಟರಗಾಳಿಗೆ ವಿದ್ಯುತ್ ತಂತಿ ಕಡಿದು ಬಿದ್ದಿತ್ತು. ಆದರೆ ಈ ಬಗ್ಗೆ ಅರಿವಿಲ್ಲದೇ ಮುಂಜಾನೆ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಸಂತೋಷ್ ತಂತಿ ಆಕಸ್ಮಿಕವಾಗಿ ತುಳಿದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಇನ್ನೊಂದೆಡೆ ಸಮೀಪದಲ್ಲಿಯೇ ನಾರಾಯಣ ಮೂಲ್ಯ ಎಂಬವರ ಮನೆಯ ಮೇಲೆ ಬೃಹತ್ ಮರದ ಕೊಂಬೆಯೊಂದು ಬಿದ್ದು ಹಾನಿ ಸಂಭವಿಸಿದೆ. ವಿದ್ಯುತ್ ತಂತಿಗಳ ಮೇಲೆ ಮರದ ಗೆಲ್ಲು ಒಂದು ಭಾಗ ಸಿಲುಕಿಕೊಂಡ ಪರಿಣಾಮ ಭಾರಿ ಜೀವ ಹಾನಿ ತಪ್ಪಿದೆ.
ಸುಂಟರಗಾಳಿಗೆ ವಿವಿಧಡೆ ಮನೆಯ ಛಾವಣಿ ಶೀಟುಗಳು ಹಾರಿ ಹೋಗಿ ಹಾನಿ ಉಂಟಾಗಿದೆ. ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸುವ ಕಾರ್ಯಕದಲ್ಲಿ ತೊಡಗಿದ್ದಾರೆ.