ಮಂಗಳೂರು : ವ್ಯಕ್ತಿಯೋರ್ವ ಹೆಣ್ಣಿನ ಹಿಂದೆ ಬಿದ್ದು, ಹನಿಟ್ರ್ಯಾಪ್‌ಗೆ ಒಳಗಾಗಿ ಹತ್ತು ಲಕ್ಷ ಕಳೆದುಕೊಂಡ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಸದ್ಯ ಈ ಪ್ರಕರಣವು ಮಂಗಳೂರಿನಲ್ಲಿ ನಡೆದಿದ್ದು, ಹನಿಟ್ರ್ಯಾಪ್‌ಗೆ ಒಳಗಾದ ವ್ಯಕ್ತಿ ಕೇರಳದ ಮೂಲದವರು ಎಂದು ಗುರುತಿಸಲಾಗಿದೆ. ಹನಿಟ್ರ್ಯಾಪ್‌ಗೆ ಒಳಗಾಗದ ವ್ಯಕ್ತಿ ಬೆದರಿಕೆಯೊಡ್ಡಿರುವ ಈ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚಾರಣೆ ನಡೆಸಿ ಯುವತಿ ಸೇರಿ ಎಂಟು ಮಂದಿಯನ್ನು ಬಂಧಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೊಂದೇಲ್ ನಿವಾಸಿ ಪ್ರೀತಮ್, ಮೂಡುಶೆಡ್ಡೆ ಪರಿಸರ ನಿವಾಸಿಗಳಾದ ಮುರುಳಿ, ಕಿಶೋರ್, ಸುಶಾಂತ್, ಅಭಿ ಸೇರಿ ಮೂಡುಬಿದಿರೆ ಮೂಲದ ಯುವತಿ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಸಣ್ಣಪುಟ್ಟ ಕೆಲಸ ಮಾಡಿಕೊಂಡಿರುವ ಈ ತಂಡ, ಇದೀಗ ದೊಡ್ಡ ಕಾರ್ಯಾಚರಣೆಗೆ ಕೈ ಹಾಕಿ ಸಿಕ್ಕಿ ಬಿದ್ದಿದೆ.
ಕೇರಳದ ಉದ್ಯಮಿ ಹನಿಟ್ರ್ಯಾಪ್‌ಗೆ ಒಳಗಾಗಿದ್ದು ಹೇಗೆ ?
ವಾಮಾಂಜೂರು ಬಳಿಯ ಮೂಡುಶೆಡ್ಡೆಯಲ್ಲಿರುವ ರೆಸಾರ್ಟ್ ಒಂದರಲ್ಲಿ ಉದ್ಯಮಿ ಫೆಬ್ರವರಿ 16 ರಂದು ಹನಿಟ್ರ್ಯಾಪ್‌ಗೆ ಒಳಗಾಗಿದ್ದಾರೆ. ಕೇರಳ ಮೂಲದ ಇಬ್ಬರು ತಮ್ಮ ಸಂಪರ್ಕಕ್ಕೆ ಬಂದಿದ್ದ ಮೂಡುಬಿದಿರೆ ಮೂಲದ ಯುವತಿಯೊಂದಿಗೆ ರೆಸಾರ್ಟ್‌ಗೆ ಹೋಗಿದ್ದಾರೆ. ರಾತ್ರಿ ವೇಳೆ ಅವರು ತಂಗಿದ್ದ ರೆಸಾರ್ಟ್ ಕೋಣೆಗೆ ತಂಡವೊಂದು ಏಕಾಏಕಿ ನುಗ್ಗಿರುತ್ತಾರೆ. ತಂಡದ ಯುವಕರು ಅಲ್ಲಿನ ದೃಶ್ಯಗಳನ್ನು ಫೋಟೋ ಹಾಗೂ ವಿಡಿಯೋ ಮಾಡಿದ್ದರು. ಬಳಿಕ ಉದ್ಯಮಿ ಮೇಲೆ ಹಲ್ಲೆಗೈದು ಹಣಕ್ಕಾಗಿ ತೊಂದರೆ ಕೊಟ್ಟಿದ್ದಾರೆ. ಅಲ್ಲದೇ ಕೇಳಿದಷ್ಟು ಹಣ ಕೊಟ್ಟಿಲ್ಲವೆಂದರೆ ವಿಡಿಯೋ ವೈರಲ್ ಮಾಡುತ್ತೇವೆ ಎಂದು ಹೆದರಿಸಿದ್ದಾರೆ. ಕೊನೆಗೆ ಹದರಿದ ಕೇರಳದ ಉದ್ಯಮಿ ತಮ್ಮಲ್ಲಿದ್ದ ಹಣವನ್ನು ಕೊಟ್ಟು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.
ಇದಾದ ಬಳಿಕ ಯುವಕ ತಂಡ ಪದೇ ಪದೇ ಕರೆ ಮಾಡಿ ತೊಂದರೆ ನೀಡಿದ್ದು, ಮೂರು ತಿಂಗಳಲ್ಲಿ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಹಣವನ್ನು ಇವರ ಬೆದರಿಕೆಗೆ ಹೆದರಿ ಕಳೆದುಕೊಂಡಿದ್ದಾರೆ. ಸದ್ಯ ಉದ್ಯಮಿ ಹನಿಟ್ರ್ಯಾಪ್‌ಯಿಂದ ಬೇಸತ್ತ ಉದ್ಯಮಿ ಕಾವೂರು ಠಾಣೆಗೆ ತೆರಳಿ ದೂರು ನೀಡಿದ್ದಾರೆ. ನಂತರ ಕಮಿಷನರ್ ಸೂಚನೆ ಮೇರೆಗೆ ಪ್ರಕರಣವನ್ನು ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸಿಸಿಬಿ ತಂಡದ ತನಿಖೆಯಿಂದ ಯುವತಿ ಹಾಗೂ ಹನಿಟ್ರ್ಯಾಪ್ ತಂಡದ ಯುವಕರಿಗೆ ಸಂಪರ್ಕ ಇದೆ ಎನ್ನುವುದು ತಿಳಿದು ಬಂದಿದೆ ಎಂದು ಪೊಲೀಸ್ ಹೇಳಿದ್ದಾರೆ.ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ಅವರು, ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ತಿಳಿಸಿದ್ದಾರೆ.