Home ತಾಜಾ ಸುದ್ದಿ ಕಾಲೇಜಿನಲ್ಲಿ ಜೂನಿಯರ್-ಸೀನಿಯರ್ ನಡುವೆ ಹೊಡೆದಾಟ : 7 ಮಂದಿ ಅರೆಸ್ಟ್

ಕಾಲೇಜಿನಲ್ಲಿ ಜೂನಿಯರ್-ಸೀನಿಯರ್ ನಡುವೆ ಹೊಡೆದಾಟ : 7 ಮಂದಿ ಅರೆಸ್ಟ್

0

ಬೆಂಗಳೂರು : ಕಾಲೇಜಿನಲ್ಲಿ ಜೂನಿಯರ್-ಸೀನಿಯರ್ ನಡುವೆ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.


ನಾಗರಬಾವಿ ಹೊರವರ್ತುಲ ರಸ್ತೆಯ ಬಿಡಿಎ ಕಾಂಪ್ಲೆಕ್ಸ್ ಬಳಿ ಖಾಸಗಿ ಕಾಲೇಜಿನ ಬಿಬಿಎ ವಿದ್ಯಾರ್ಥಿ ಮೇಲೆ ಅದೇ ಕಾಲೇಜಿನ ಮೂವರು ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದರು.

ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಸಾಹಸಗೌಡ ಅಲಿಯಾಸ್ ಸತ್ಯ, ಹೆಚ್ ಬಿ ಜೀವನ್, ರವಿಕುಮಾರ್, ಚಂದನ್, ಅಭಿಷೇಕ್, ಗೌತಮ್ ಗೌಡ, ಎ ಎಸ್ ಸೂರ್ಯ ಎಂದು ಗುರುತಿಸಲಾಗಿದೆ. ಜೂನ್ 5 ರಂದು ವಿದ್ಯಾರ್ಥಿ ದರ್ಶನ್ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು. ಸಾಹಸಗೌಡ ಅಲಿಯಾಸ್ ಸತ್ಯ, ಹೆಚ್ ಬಿ ಜೀವನ್, ಚಂದನ್ ಅದೇ ಕಾಲೇಜಿನ ಸೀನಿಯರ್ ವಿದ್ಯಾರ್ಥಿಗಳಾಗಿದ್ದು, ಇವರುಗಳು ಹಾಗೂ ಜೂನಿಯರ್ ವಿದ್ಯಾರ್ಥಿ ದರ್ಶನ್ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿತ್ತು ಎನ್ನಲಾಗಿದೆ. ಇವರ ಜಗಳಕ್ಕೆ ಹೊರಗಿನವರು ಸಾಥ್ ಕೊಟ್ಟಿದ್ದು, ಗುಂಪು ಕಟ್ಟಿಕೊಂಡು ದರ್ಶನ್ ಮೇಲೆ ಹಲ್ಲೆ ನಡೆಸಿದ್ದರು. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here