ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 52 ನೇ ಕಣ್ಣೂರು ವಾರ್ಡಿನ ಪೇರ್ಲ ಶ್ರೀ ದುರ್ಗಾಪರಮೇಶ್ವರೀ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ರಸ್ತೆ ಕಾಮಗಾರಿಯು ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಭೂಮಿ ಪೂಜೆಯು ನಡೆಯಿತು.


ನಂತರ ಮಾತನಾಡಿದ ಶಾಸಕರು ಇಲ್ಲಿಯತನಕ ಇಲ್ಲಿರುವ ದೇವಸ್ಥಾನದವರೆಗೆ ನಾಲ್ಕು ಚಕ್ರದ ವಾಹನಗಳು ಹೋಗಲು ಸಾಧ್ಯವಾಗದಂತಹ ಪರಿಸ್ಥಿತಿಯಿದ್ದ ಕಾರಣ ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ನಂತರದ ದಿನಗಳಲ್ಲಿ ಶತಾಯಗತಾಯ ಇಲ್ಲಿಗೊಂದು ಸುಸಜ್ಜಿತ ರಸ್ತೆ ನಿರ್ಮಾಣ ಮಾಡಲೇಬೇಕೆಂಬ ನಮ್ಮೆಲ್ಲರ ಆಶಯಕ್ಕೆ ಆಸರೆಯಾಗಿ ನಿಂತವರು ಇಲ್ಲಿನ ಜಾಗದ ಮಾಲೀಕರಾದ ಶ್ರೀ ಅಶೋಕ್ ರವರು. ಸ್ಥಳೀಯರ ಸಹಿತ ನಾವೆಲ್ಲರೂ ಮನವಿ ಮಾಡಿದ್ದರಿಂದಾಗಿ ಅವರು ಉಚಿತವಾಗಿ ಜಾಗ ಬಿಟ್ಟು ಕೊಟ್ಟ ಕಾರಣ ಇಂದು ಇಲ್ಲಿ ರಸ್ತೆ ನಿರ್ಮಾಣ ಸಾಧ್ಯವಾಗುತ್ತಿದೆ. ಅವರಿಗೆ ಸರ್ವರ ಪರವಾಗಿ ವಿಶೇಷ ಧನ್ಯವಾದಗಳು ಎಂದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಮನಪಾ ಸದಸ್ಯರಾದ ಚಂದ್ರಾವತಿ ವಿಶ್ವನಾಥ್, ಬಿಜೆಪಿ ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ವಿಶ್ವನಾಥ್, ಕೇಶವ, ಗಣೇಶ್ ಶೆಟ್ಟಿ, ವಸಂತ ಶೆಟ್ಟಿ, ದೂಮಣ್ಣ ಶೆಟ್ಟಿ ಅಶೋಕ್ ಶೆಟ್ಟಿ, ಸತೀಶ್ ಶೆಟ್ಟಿ, ನಾಗರಾಜ್, ಮನೋಜ್ ವೀರನಗರ, ಕರುಣಾಕರ, ತಾರನಾಥ್, ಮನೋಹರ್, ಶೇಖರ್ ಪೂಜಾರಿ, ದೇಜಪ್ಪ, ಯಶವಂತ್ ಅಮೀನ್, ಯಾದವ, ರಾಜೇಶ್, ಗೋಪಾಲ್, ಪ್ರಕಾಶ್, ಜಯರಾಜ್, ವರುಣ್ ಅಂಬಟ್, ಸೇರಿದಂತೆ ಸ್ಥಳೀಯರು, ಮಹಿಳೆಯರು, ಉಪಸ್ಥಿತರಿದ್ದರು.




