ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ “ನಾರಿ ಶಕ್ತಿ ವಂದನ್ ಅಧಿನಿಯಮ್” ಕುರಿತಾದ ಮಂಗಳೂರು ವಿಭಾಗ ಮಟ್ಟದ ಪತ್ರಿಕಾ ಗೋಷ್ಠಿ ನಡೆಯಿತು.


ನಾರಿಶಕ್ತಿ ವಂದನ ಕಾಯ್ದೆ ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದ್ದು , ಈ ಕಾಯ್ದೆಯ ಮೂಲಕ ದೇಶದ ಪ್ರಜಾಪ್ರಭುತ್ವದಲ್ಲಿ ಮಹಿಳೆಯರು ನೀತಿ ನಿರೂಪಣೆ ಮತ್ತು ನಿರ್ಧಾರ ಕೈಗೊಳ್ಳುವಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ”- ಎಂದು ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಮಹಿಳಾ ನೇತೃತ್ವದ ಸಬಲೀಕರಣಕ್ಕೆ ಕೈಗೊಂಡ ಮಹತ್ವಪೂರ್ಣ ಕ್ರಮಗಳ ಬಗ್ಗೆ ಬೆಳಕು ಚೆಲ್ಲಿದರು.

ಪತ್ರಿಕಾ ಗೋಷ್ಠಿಯಲ್ಲಿ ಡಾ.ಮಂಜುಳಾ ರಾವ್ ಮಹಿಳಾಮೋರ್ಚಾ ಜಿಲ್ಲಾಧ್ಯಕ್ಷರು ದಕ್ಷಿಣ ಕನ್ನಡ, ಶಿಲ್ಪಾ ಜಿ ಸುವರ್ಣ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಿಳಾ ಮೋರ್ಚಾ ,ಶ್ವೇತಾ ಪೂಜಾರಿ ರಾಜ್ಯ ಕಾರ್ಯದರ್ಶಿ ಮಹಿಳಾಮೋರ್ಚಾ ಕರ್ನಾಟಕ, ಸುಲೋಚನಾ ಭಟ್ ( ರಾಜ್ಯ ಕಾರ್ಯಕಾರಿಣಿಯ ಸದಸ್ಯರು) ಜಿಲ್ಲಾ ಮಹಿಳಾಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಸಂಧ್ಯಾ ವೆಂಕಟೇಶ್ , ಲಕಿತಾ ಶೆಟ್ಟಿ ಉಪಸ್ಥಿತರಿದ್ದರು.



