ಮಂಗಳೂರು : ಏಪ್ರಿಲ್ 10 ರಂದು “90 ಎಮ್ ಎಲ್” ತುಳು ಚಲನಚಿತ್ರ ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ.

Prakhara News
1 Min Read

ಮಂಗಳೂರು : ಕರಾವಳಿ ಸಿನಿಪ್ರಿಯರಿಗೆ ಮನರಂಜನೆಯ ಹೊಸ ಕಾಣಿಕೆಯಾಗಿರುವ “90 ಎಮ್ ಎಲ್” ತುಳು ಚಲನಚಿತ್ರವು ಏಪ್ರಿಲ್ 10 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ ಬರುತ್ತಿದೆ ಚಿತ್ರದ ನಟ ವಿನೀತ್ ಕುಮಾರ್ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಡಿ ಡಿ ಪ್ರೊಡಕ್ಷನ್ ಲಾಂಛನದಲ್ಲಿ ರಂಜಿತ್ ಸಿ ಬಜಾಲ್ ನಿರ್ದೇಶನದಲ್ಲಿ ಹಾಗೂ ಡೋಲಿ ಡಿ ಸೋಜ ನಿರ್ಮಾಣದಲ್ಲಿ ತಯಾರಾದ ಈ ಚಿತ್ರವು ಮಂಗಳೂರು, ಉಡುಪಿ, ಪುತ್ತೂರು, ಬೆಳ್ತಂಗಡಿ, ಕಾರ್ಕಳ, ಸುಳ್ಯ, ದೇರಳಕಟ್ಟೆ, ಸುರತ್ಕಲ್, ಪಡುಬಿದ್ರಿ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಬಿಡುಗಡೆಯಾಗಲಿದೆ.

ಚಿತ್ರದ ಚಿತ್ರೀಕರಣ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ನಡೆದಿದ್ದು, ಸ್ಥಳೀಯ ಸೌಂದರ್ಯವನ್ನು ಪರದೆ ಮೇಲೆ ಹಿಡಿದಿಡಲಾಗಿದೆ. ವಿನೀತ್ ಕುಮಾರ್ ಅಭಿನಯದ ಈ ಚಿತ್ರದಲ್ಲಿ ರುಹಾನಿ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ರೋಶನ್ ಶೆಟ್ಟಿ, ದೀಪಕ್ ರೈ ಪಾಣಾಜೆ, ಉಮೇಶ್ ಮಿಜಾರ್, ಪುಷ್ಪರಾಜ್ ಬೊಳ್ಳೂರು, ನಮಿತಾ, ಶೈಲಾಶ್ರೀ ಹಾಗೂ ಧೃತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರಕ್ಕೆ ರಂಜಿತ್ ಸಿ ಬಜಾಲ್ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ನೀಡಿದ್ದು, ತುಳಸಿದಾಸ್ ಮಂಜೇಶ್ವರ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಎಂವಿ ಛಾಯಾಗ್ರಹಣ, ಸೃಜನ್ ಕುಮಾರ್ ತೋನ್ಸೆ ಸಂಗೀತ, ಸಚಿನ್ ರಾಮ್ ಸಂಕಲನ ಮತ್ತು ಆಚಾರ್ಯಗುರು ವಿನ್ಯಾಸ ನಿರ್ವಹಿಸಿದ್ದಾರೆ.ಹಾಸ್ಯ ಮನರಂಜನೆಯೊಂದಿಗೆ ಪ್ರೇಕ್ಷಕರ ಅಭಿರುಚಿಗೆ ತಕ್ಕ ಕಥಾಹಂದರವನ್ನು ಹೊಂದಿರುವ “90 ಎಮ್ ಎಲ್” ಚಿತ್ರವು ಬಿಡುಗಡೆಯ ನಿರೀಕ್ಷೆಯನ್ನು ಹೆಚ್ಚಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕ ಡೋಲಿ ಡಿ,ನಟ ವಿನೀತ್ ಕುಮಾರ್,ಸಚಿನ್, ಉಮೇಶ್ ಮಿಜಾರ್,ರುಹಾನಿ ಶೆಟ್ಟಿ,ಶೈಲಾಶ್ರೀ ಹಾಗೂ ಧೃತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Share This Article
Leave a Comment