ಪುತ್ತೂರು : ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು ಪ್ರಕರಣ: ಆತ್ಮಹತ್ಯೆ ಶಂಕೆ..!!

Prakhara News
1 Min Read

ಪುತ್ತೂರು : ಕಬಕ-ಪುತ್ತೂರು ರೈಲ್ವೆ ನಿಲ್ದಾಣದ ಬಳಿಯ ಹಾರಾಡಿ ಬ್ರಿಡ್ಜ್ ಸಮೀಪ ರೈಲು ಡಿಕ್ಕಿಯಾಗಿ ಯುವಕನೊಬ್ಬ ಮೃತಪಟ್ಟ ಘಟನೆ ವರದಿಯಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಇದು ಆತ್ಮಹತ್ಯೆ ಪ್ರಕರಣವಾಗಿರುವುದಾಗಿ ತಿಳಿದು ಬಂದಿದೆ.

ಮೃತರನ್ನು ಉಪ್ಪಿನಂಗಡಿ ಗ್ರಾಮದ ಪುಳಿತ್ತಡಿ ನಿವಾಸಿ ಸುಮತಿ ಅವರ ಪುತ್ರ ಪವನ್ ಕುಮಾರ್ ಎಂದು ಗುರುತಿಸಲಾಗಿದೆ.

ಪವನ್‌ ಕುಮಾ‌ರ್ ಶಿಫ್ ನಲ್ಲಿ ಕೆಲಸ ಮಾಡುತ್ತಿದ್ದು, ಕೆಲ ದಿನಗಳ ಹಿಂದೆ ಮನೆಗೆ ಬಂದಿದ್ದರು. ಫೆಬ್ರವರಿ 20ರಂದು ಮಧ್ಯಾಹ್ನ ಮನೆಯಿಂದ ಹೊರಟಿದ್ದ ಅವರು, ರಾತ್ರಿ ವೇಳೆ ಕಬಕ-ಪುತ್ತೂರು ರೈಲ್ವೆ ನಿಲ್ದಾಣದ ಸಮೀಪದ ಹಾರಾಡಿ ಬ್ರಿಡ್ಜ್ ಬಳಿ ರೈಲಿನ ಅಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

Share This Article
Leave a Comment