ಮಂಗಳೂರು : ವಿಶ್ವ ಬಂಟ ಪ್ರತಿಷ್ಠಾನ ಟ್ರಸ್ಟ್ ಇದರ ವತಿಯಿಂದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ನಗರದ ಬಂಟ್ಸ್ ಹಾಸ್ಟೆಲ್ನ ಗೀತಾ ಎಸ್.ಎಂ.ಶೆಟ್ಟಿ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ವಿಶ್ವ ಬಂಟ ಪ್ರತಿಷ್ಠಾನದ ಮಾಜಿ ಅಧ್ಯಕ್ಷ ಡಾ.ಎಂ.ಶಾ0ತಾರಾಮ ಶೆಟ್ಟಿ ಮಾತನಾಡಿ” ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡುವ ಮೂಲಕ ಅವರಲ್ಲಿ
ಆತ್ಮವಿಶ್ವಾಸ ಮೂಡಿಸಲಾಗುತ್ತಿದೆ. ಶಿಕ್ಷಣದ ಜತೆಗೆ ಉನ್ನತ ಗುರಿ ಸಾಧಿಸಲು ಪ್ರೇರಣೆ ನೀಡಲಾಗುತ್ತಿದೆ’ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕುಶಾಲ್ ಎಸ್. ಹೆಗ್ಡೆ ಮಾತನಾಡಿ ” ವಿಶ್ವ ಬಂಟ ಪ್ರತಿಷ್ಠಾನ ಟ್ರಸ್ಟ್ನಿಂದ ಇದುವರೆಗೆ ೬ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನೆರವು ನೀಡಿ ಅವರ ಆಯ್ಕೆಯ ಅಧ್ಯಯನಕ್ಕೆ ಪ್ರೋತ್ಸಾಹ ನೀಡಲಾಗಿದೆ. ವಿದ್ಯಾರ್ಥಿ ವೇತನ ವಿತರಣೆ ಜತೆಗೆ ವೈದ್ಯಕೀಯ ನೆರವು, ಯಕ್ಷಗಾನ ಕಲಾವಿದರಿಗೆ ಪ್ರೋತ್ಸಾಹ, ಪ್ರಗತಿಪರ ಮಹಿಳಾ ರೈತರಿಗೆ ಸನ್ಮಾನ ಮುಂತಾದ ಸಮಾಜಮುಖಿ ಕಾರ್ಯಕ್ರಮಗಳನ್ನು ಟ್ರಸ್ಟ್ ಹಮ್ಮಿಕೊಂಡಿದೆ’ಎ0ದರು.

ವಿಶ್ವ ಬಂಟ ಪ್ರತಿಷ್ಠಾನ ಟ್ರಸ್ಟ್ನ ಕಾರ್ಯದರ್ಶಿ ಡಾ.ಸಚ್ಚಿದಾನಂದ ರೈ, ಉಪಾಧ್ಯಕ್ಷರಾದ ಸಿಎ ಸುಧೀರ್ಕುಮಾರ್ ಶೆಟ್ಟಿ, ಟಿ.ಸುಬ್ಬಯ್ಯ ಶೆಟ್ಟಿ, ಜ್ಯೋತಿ ಆಳ್ವ, ಖಜಾಂಜಿ ಸಿಎ ಪ್ರವೀಣ್ ಕುಮಾರ್ ಶೆಟ್ಟಿ, ಯೋಜನಾ ನಿರ್ದೇಶಕ ಡಾ.ಬಿ. ಸಂಜೀವ ರೈ ಉಪಸ್ಥಿತರಿದ್ದರು.
ವೈದ್ಯಕೀಯ, ಇಂಜಿನಿಯರಿ0ಗ್, ಪ್ಯಾರಾಮೆಡಿಕಲ್, ಸ್ನಾತಕೋತ್ತರ ಅಧ್ಯಯನ, ಪದವಿ ಮತ್ತು ಡಿಪ್ಲೊಮಾ ಕಲಿಯುತ್ತಿರುವ ೧೫೦ ವಿದ್ಯಾರ್ಥಿಗಳಿಗೆ ೪೧ ಲಕ್ಷ ರೂ. ಅಧಿಕ ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಯಿತು.

