ಕೋರ್ಟ್ ಗೆ ಹಾಜರಾಗದೇ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

Prakhara News
0 Min Read
Oplus_0

ಮಂಗಳೂರು : ಕೋರ್ಟ್ ಗೆ ಹಾಜರಾಗದೇ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ದಿನಾಂಕ: 11-11-2013 ರಂದು ದೂರುದಾರರಾದ ಚಿತ್ರಶೇಖರ ಮಡಂತ್ಯಾರ್‌ ಎಂಬುವವರಿಗೆ, ಆರೋಪಿ ಆಲ್ವಿನ್ ರೊಡ್ರಿಗಸ್ ಎಂಬವರು ಹಲ್ಲೆ ಮಾಡಿದ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಕ್ರ 65/2013 ಕಲಂ 324,504 IPC ಪ್ರಕರಣದಲ್ಲಿ ಮಾನ್ಯ ನ್ಯಾಯಲಯಕ್ಕೆ ಹಾಜರಾಗದೆ ಸುಮಾರು 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇವರನ್ನು ಬೆಂಗಳೂರು ನಗರ ವ್ಯಾಪ್ತಿಯ ಸಂಪಿಗೆ ರಾಮನಗರ ಎಂಬಲ್ಲಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Share This Article
Leave a Comment