ಪಡೀಲ್ : ಸಹಕಾರಿ ಸಂಸ್ಥೆ ಸ್ಥಾಪನೆಯಾಗಿ 14 ವರ್ಷಗಳಲ್ಲಿ ವೇಗ ವಾಗಿ ಅಭಿವೃದ್ಧಿ ಸಾಧಿಸುವ ಜತೆಗೆ ಸಹಕಾರಿ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಪರಿವರ್ತನೆ ಮಾಡಬಹುದು ಎಂಬುದನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ತೋರಿಸಿಕೊಟ್ಟಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.


ಪಡೀಲ್ ನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಪ್ರಧಾನ ಕಚೇರಿ ಆತ್ಮಶಕ್ತಿ ಸೌಧದಲ್ಲಿ ಆಯೋಜಿಸಲಾದ ಆರೋಗ್ಯ ಸೇವಾ ಸಂಗಮದ ಸಮಾರೋಪ ಹಾಗೂ ಸಂಘದ 14ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ದುಡಿಯುವ ಬಂಡವಾಳ, ಠೇವಣಾತಿ ಸಂಗ್ರಹ, ಗಳಿಸಿದ ಲಾಭ, ಮಾಡಿದ ಶಾಖೆಗಳ ಸಂಖ್ಯೆ, ನೀಡಿದ ಡಿವಿಡೆಂಡ್ಗಳನ್ನು ತುಲನೆ ಮಾಡಿದರೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘವು ಅಸಾಮಾನ್ಯ ಸಾಧನೆ ಮಾಡಿದೆ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ಕೇವಲ ಶಾಖೆಗಳನ್ನು ವಿಸ್ತರಿಸುತ್ತ ಹೋಗಿಲ್ಲ. ಸಹಕಾರಿ ಕ್ಷೇತ್ರದಲ್ಲಿ ಯಾವೆಲ್ಲ ವ್ಯವಸ್ಥೆ ಜೋಡಿಸಬಹುದೋ ಅದನ್ನು ಮಾಡಿ ಸಾಧಿಸಿ ತೋರಿಸಿದ್ದಾರೆ. ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ನೇತೃತ್ವವೂ ಇದಕ್ಕೆ ಕಾರಣ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷಸಹಕಾರ ರತ್ನ ಚಿತ್ತರಂಜನ್ ಬೋಳಾರ್, ಸಂಘದಆಡಳಿತಮಂಡಳಿಯ ಕಾರ್ಯಯೋಜನೆ, ಸಿಬಂದಿ ಶ್ರಮದಿಂದ, ಸಲಹಾ ಸಮಿತಿ ಸದಸ್ಯರು ಹಾಗೂ ಎಲ್ಲ ಸದಸ್ಯರ ಸಹಕಾರದಿಂದ ಠೇವಣಿಗಳ ಸಂಗ್ರಹಣೆಯಲ್ಲಿ ಸಾಲ ನೀಡುವಿಕೆಯಲ್ಲಿ ಹಾಗೂ ವಸೂಲಾತಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದೆ ಎಂದರು.
ಸಂಘದ ಶಾಖೆಗಳ ವಿವಿಧ ಸೇವೆಯ ಪ್ರಗತಿಗೆ ಕಾರಣಕರ್ತರಾದ ಶಾಖೆಯ ಶಾಖಾಧಿಕಾರಿಗಳು, ಸಿಬಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಘವು ನಡೆಸಿರುವ 100 ಆರೋಗ್ಯ ಶಿಬಿರಗಳಲ್ಲಿ ಸಂಘದ ಜತೆ ಕೈ ಜೊಡಿಸಿರುವ ವೈದ್ಯರನ್ನು, ಆರೋಗ್ಯ ಸೇವಾ ಕಾರ್ಯಕರ್ತರನ್ನು ಅಭಿನಂದಿಸಲಾಯಿತು.
ಕಣಚೂರು ವೈದ್ಯಕೀಯ ಸಂಸ್ಥೆಯ ನಿರ್ದೇಶಕ ಅಬ್ದುಲ್ ರೆಹಮಾನ್, ಆತ್ಮಶಕ್ತಿ ಸಹಕಾರಸಂಘದ ಉಪಾಧ್ಯಕ್ಷನೇಮಿರಾಜ್ ಪಿ., ನಿರ್ದೇಶಕರಾದ ಜಿ. ಪರಮೇಶ್ವರ ಪೂಜಾರಿ, ಆನಂದ ಎಸ್. ಕೊಂಡಾಣ, ಸೀತಾರಾಮ ಎನ್.. ರಮಾನಾಥ ಸನಿಲ್, ಮುದ್ದು ಮೂಡುಬೆಳ್ಳೆ ದಿವಾಕರ್ ಬಿ.ಪಿ., ಗೋಪಾಲ್ ಎಂ., ಚಂದ್ರಾವತಿ, ಉಮಾವತಿ, ಬ್ರಹ್ಮಶ್ರೀ ನಾರಾಯಣ ಗುರು ಪ್ರಕಾಶನ ಮತ್ತು ಚಾರಿಟೆಬಲ್ ಟ್ರಸ್ಟ್ ಗೌರವ ಅಧ್ಯಕ್ಷ ವಾಮನ್ ಕೆ., ಅಧ್ಯಕ್ಷ ಗೋಪಾಲ್ ಪೂಜಾರಿ ಉಪಸ್ಥಿತರಿದ್ದರು.ಚಾರಿಟೆಬಲ್ ಟ್ರಸ್ಟ್ನ ಜತೆ ಕಾರ್ಯ ದರ್ಶಿ ವಿಶ್ವನಾಥ ರೆಂಜಾಳ, ಸಂಘದ ಶಾಖಾಧಿಕಾರಿ ಧನಲಕ್ಷ್ಮೀ ನಿರೂಪಿಸಿದರು. ಮುಖ್ಯ ರ್ಯನಿರ್ವಹಣಾಧಿಕಾರಿ ಸೌಮ್ಯಾ ವಿಜಯ್ ವಂದಿಸಿದರು.

