ಮುಂಡಾಜೆ: ಉಜಿರೆ ರಬ್ಬರ್ ಸೊಸೈಟಿಯ ಉಪಾಧ್ಯಕ್ಷ ಅನಂತ್ ಭಟ್ ಮಚ್ಚಿಮಲೆಯವರ ರಬ್ಬರ್ ತೋಟದಲ್ಲಿ ನಾಲ್ಕು ಚಿರತೆಗಳು ಪತ್ತೆಯಾಗಿದ್ದು, ಮುಂಡಾಜೆಯ ಜನರಲ್ಲಿ ಆತಂಕ ಮೂಡಿಸಿದೆ.


ರಬ್ಬರ್ ಟ್ಯಾಪಿಂಗ್ ನ ಕಾರ್ಮಿಕರು ಚಿರತೆಗಳನ್ನು ನೋಡಿ ಕಕ್ಕಾಬಿಕ್ಕಿಯಾಗಿ ಓಡಿದ್ದು, ಅವರು ಅನಂತ್ ಭಟ್ ರವರಿಗೆ ಮಾಹಿತಿ ನೀಡಿದ್ದಾರೆ.
ಒಂದು ದೊಡ್ಡ ಚಿರತೆಯ ಜೊತೆ ಮೂರು ಮರಿ ಚಿರತೆಗಳು ಪತ್ತೆಯಾಗಿದ್ದು, ಮತ್ತಷ್ಟು ಚಿರತೆಗಳು ಇರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ಸುಮಾರು 3-4 ದಿನಗಳಿಂದ ಚಿರತೆ ಮುಂಡಾಜೆ ಪರಿಸರದಲ್ಲಿ ಓಡಾಡುತ್ತಿದ್ದು, ಅರಸಮಜಲು, ಕುಂಟಾಲಪಲ್ಕೆ, ಕಲ್ಲಪಿತ್ತಿಲು ಎಂಬಲ್ಲಿ ಓಡಾಟ ನಡೆಸಿದ್ದು, ಜ.12ಂದು ಅರಸಮಜಲು ಚಿದಾನಂದ ನಾಯ್ಕ ರವರ ಮನೆಯ ಹಟ್ಟಿಯಲ್ಲಿದ್ದ ಕರುವನ್ನು ಚಿರತೆಯು ತಿಂದು ಹೋಗಿದ್ದು, ನಂತರ ಸ್ಥಳೀಯರ ನಾಯಿಯನ್ನು ತಿಂದ್ದು ಹಾಕಿದ ಬಗ್ಗೆ ಮಾಹಿತಿ ತಿಳಿದು ಬಂದಿದೆ.

