ಮಂಗಳೂರು ; ನಮ್ಮ ಸಂಸ್ಥೆಯು ಸಾಮಾಜಿಕ, ಶೈಕ್ಷಣಿಕ, ಕ್ರೀಡೆ ಹಾಗೂ ಧಾರ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡು ಶಕ್ತಿನಗರ ಪರಿಸರದ ಅಭಿಮಾನದ, ಹೆಮ್ಮೆಯ ಸಂಸ್ಥೆ ಎಂಬ ಹೆಗ್ಗಳಿಕೆಯೊಂದಿಗೆ ಬೆಳೆದು ಇದೀಗ ಸ್ವರ್ಣ ಸಂಭ್ರಮದ ಸಡಗರದಲ್ಲಿದೆ. ನಮ್ಮ ಸಂಸ್ಥೆಯು ವಿಶೇಷವಾಗಿ ಸ್ಥಳೀಯ ಸರಕಾರಿ ವಿದ್ಯಾಸಂಸ್ಥೆಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಸರ್ವ ರೀತಿಯ ಸಹಕಾರವನ್ನು ನೀಡುತ್ತಾ ಬಂದಿದೆ. ನಮ್ಮ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತೀವರ್ಷ ಆಟೋಟ ಸ್ಪರ್ಧೆಗಳಲ್ಲಿ ಹಾಗೂ ಕಲಿಯುವಿಕೆಯಲ್ಲಿ ಬಹುಮಾನ ನೀಡುತ್ತಿರುವುದಲ್ಲದೆ, ಅವರ ಪ್ರತಿಭೆಗಳನ್ನು ಪ್ರದರ್ಶಿಸಲು ನಮ್ಮ ವಾರ್ಷಿಕೋತ್ಸವದ ವೇದಿಕೆಯಲ್ಲಿ ಅವಕಾಶ ನೀಡುತ್ತಾ ಬಂದಿದೆ. ಹದಿನೈದು ವರುಷಗಳ ಹಿಂದೆ ಶಕ್ತಿನಗರದಲ್ಲಿ ಪ್ರೌಢ ಶಾಲೆ ಹಾಗೂ ಎರಡು ವರುಷಗಳ ಹಿಂದೆ ಪದವಿ ಪೂರ್ವ ಕಾಲೇಜುಗಳು ಆರಂಭವಾಗುವಲ್ಲಿ ನಮ್ಮ ಸಂಸ್ಥೆಯ ನಿರಂತರ ಪ್ರಯತ್ನ ಅಡಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕರಾದ ಹರೀಶ್ ಕುಮಾರ್ ಜೋಗಿಯವರು ತಿಳಿಸಿದ್ದಾರೆ.


ಈ ಸ್ವರ್ಣ ಸಂಭ್ರಮವನ್ನು ವಿಶೇಷವಾಗಿ ಆಚರಿಸುವ ಉತ್ಸಾಹದಲ್ಲಿದ್ದು, ಇದರ ಪ್ರಯುಕ್ತ ನಾವು ತಾ। 17-01-2026ರ ಶನಿವಾರ ಹಾಗೂ 18-01-2026ರ ಆದಿತ್ಯವಾರಂದು “PFC ಪರ್ಬ” ಎಂಬ ಆಹಾರ ಮೇಳ, ಪ್ರದರ್ಶನ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಶಕ್ತಿನಗರದ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದೇವೆ ಎಂದರು.
ತಾ। 17ರಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವೇದವ್ಯಾಸ ಕಾಮತ್ ಹಾಗೂ ಇತರ ಗಣ್ಯರು ಪರ್ಬವನ್ನು ಉದ್ಘಾಟಿಸಲಿದ್ದು ತಾ। 18ರಂದು ಸಚಿಜೆ 7ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ತುಳು, ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯ ಹೆಸರಾಂತ ಕಲಾವಿದ ಕುಸಲ್ದರಸೆ ಶ್ರೀ ನವೀನ್ ಡಿ. ಪಡೀಲ್‌ರವರನ್ನು ಗೌರವಿಸಿ ಸನ್ಮಾನಿಸಲಾಗುವುದು. ಹಾಗೆಯೇ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚಿರುವ ಕ್ರೀಡಾ ಪ್ರತಿಭೆಗಳಾದ ಕು| ನಿಷ್ಕಾ ರೈ, ಕು| ಹಿಮಾನಿ ಪಿ. ಸುವರ್ಣ, ಕು| ಸೌಭಾಗ್ಯ ಜೋಗಿ, ಪದವು ಅಂಗನವಾಡಿಯ ನಿವೃತ್ತ ಸಹಾಯಕಿ ಶ್ರೀಮತಿ ಜಾನಕಿ ಮುಂತಾದವರನ್ನು ಆ ದಿನ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.
ಆಹಾರ ಮೇಳದಲ್ಲಿ ಸುಮಾರು 30ಕ್ಕೂ ಮೇಲ್ಪಟ್ಟು ವಿವಿಧ ಖಾದ್ಯಗಳ ಮಳಿಗೆಗಳು ಹಾಗೂ ಸುಮಾರು 10ಕ್ಕೂ ಮಿಕ್ಕಿದ ವಿವಿಧ ಪ್ರದರ್ಶನ, ಆಟದ ಮಳಿಗೆಗಳು ಇರಲಿದೆ.
ಮನರಂಜನೆಯ ಅಂಗವಾಗಿ ಸ್ಥಳೀಯ ನಾಲ್ಕು ಅಂಗನವಾಡಿ ಶಾಲೆಯ ಮಕ್ಕಳಿಂದ ನೃತ್ಯ ಪ್ರದರ್ಶನ, ಸ್ಥಳೀಯ ಸಂಘ ಸಂಸ್ಥೆಗಳಿಂದ, ತಂಡಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳು, ಶಿಬರೂರು ಬ್ಯಾಂಡ್ ತಂಡದಿಂದ ಟ್ರಂಪೆಟ್ ಬ್ಯಾಂಡ್ ತಾಸೆ ಜುಗುಲ್ ಬಂದಿ, ಬಿಕರ್ನಕಟ್ಟೆ ವೀರಮಾರುತಿ ವ್ಯಾಯಾಮ ಶಾಲೆಯ ತಂಡದಿಂದ ತಾಲೀಮು ಪ್ರದರ್ಶನ ಹಾಗೂ ದಿ ನ್ಯೂ ಓಶನ್ ಕಿಡ್ಸ್ ತಂಡದಿಂದ ನೃತ್ಯ ವೈಭವ ನಡೆಯಲಿದೆ . ಸಂಸ್ಥೆಯ ಸ್ವರ್ಣ ಸಂಭ್ರಮ ವಾರ್ಷಿಕೋತ್ಸವದ ಕಾರ್ಯಕ್ರಮಗಳು ಫೆಬ್ರವರಿ 13ರಿಂದ 17ರವರೆಗೆ ವಿವಿಧ ಮನರಂಜನಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪದವು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರು ಕುಶಾಲ್ ಕುಮಾರ್ ಕೆ , ,
ರಾಮಕೃಷ್ಣ ಭಟ್ – ಕಾರ್ಯದರ್ಶಿ, ಸ್ವರ್ಣ ಸಂಭ್ರಮ ಸಮಿತಿ,ದಿನೇಶ್ ಟಿ. ಉಪಾಧ್ಯಕ್ಷರು, ಸ್ವರ್ಣ ಸಂಭ್ರಮ ಸಮಿತಿ ಪ್ರಸಾದ್ ಟಿ. ಪ್ರಧಾನ ಕಾರ್ಯದರ್ಶಿ, ಸ್ವರ್ಣ ಸಂಭ್ರಮ ಸಮಿತಿ,ರವೀಂದ್ರ ರೈ ಯವರು ಉಪಸ್ಥಿತರಿದ್ದರು

