ದಕ್ಷಿಣ ಕನ್ನಡ: ಮುಡಿಪುವಿನಲ್ಲಿ ತಲೆ ಎತ್ತುತ್ತಿದೆ ಏಷ್ಯಾದ ದೊಡ್ಡ ಕಾರಾಗೃಹ , ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿದ್ದು, ಎರಡನೇ ಹಂತದ ಕಾಮಗಾರಿಗೆ ಅನುದಾನಕ್ಕಾಗಿ ಒತ್ತಾಯ ಹಾಕಲಾಗ್ತಿದೆ. ಹೌದು ಮಂಗಳೂರು ನಗರದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾ ಕಾರಾಗೃಹಕ್ಕೆ ಎರಡನೇ ಹಂತದ ಕಾಮಗಾರಿ ಇದೀಗ ಸದ್ಯಕ್ಕೆ ನಿಂತಿದೆ. ಒಂದನೇ ಹಂತದ ಸುಮಾರು 110 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ಕಾಮಗಾರಿಯೂ ಪೂರ್ಣಗೊಂಡಿದೆ. ಎರಡನೇ ಹಂತದ ಸುಮಾರು 195 ಕೋಟಿ ರೂಪಾಯಿ ಮೊತ್ತದ ಅಂದಾಜು ಪಟ್ಟಿಯನ್ನು ಸರಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ.



ಏಷ್ಯಾದ ದೊಡ್ಡ ಕಾರಾಗೃಹ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರ್ನಾಡು, ಇರಾ ಮತ್ತು ಚೇಳೂರು ಗ್ರಾಮಗಳನ್ನೊಳಗೊಂಡ ಸುಮಾರು 100 ಎಕರೆ ಪ್ರದೇಶದಲ್ಲಿ ಏಷ್ಯಾದ ದೊಡ್ಡ ಕಾರಾಗೃಹ ನಿರ್ಮಾಣಗೊಳ್ಳುತ್ತಿದ್ದು, ಒಂದನೇ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ ಎರಡೇ ಹಂತದ ಕಾಮಗಾರಿ ಇನ್ನಷ್ಟೇ ಆರಂಭಗೊಳ್ಳಬೇಕಿದೆ.

