ಮಂಗಳೂರು: ಅಯ್ಯಪ್ಪ ಸ್ವಾಮಿಯ ಮಹಿಮೆ ಸಾರುವ “ಬೆಟ್ಟವ ಏರುತ್ತಾ ಬಂದೇನು ಅಯ್ಯಪ್ಪ” ಎಂಬ ಹೊಸ ಕನ್ನಡ ಭಕ್ತಿಗೀತೆ, ಪ್ರಖ್ಯಾತ ಗಾಯಕ ಧನಂಜಯ ವರ್ಮ ಅವರ ಸುಮಧುರ ಗಾಯನದಲ್ಲಿ, ಗುರುರಾಜ್ ಎಂ.ಬಿ. ಅವರ ಸಂಗೀತ ನಿರ್ದೇಶನದಲ್ಲಿ ಹಾಗೂ ಶ್ರೀ ವಸಂತಕುಮಾರ ಶೆಟ್ಟಿ ಅವರ ಸಾಹಿತ್ಯದೊಂದಿಗೆ ಸುಂದರವಾಗಿ ಮೂಡಿಬಂದಿದೆ.


ಸಾಯಿ ರಾಮ್ ಸ್ಟುಡಿಯೋ, ಮಂಗಳೂರು ಇಲ್ಲಿ ಧ್ವನಿಮುದ್ರಣಗೊಂಡಿರುವ ಈ ಗೀತೆಗೆ ಸೂರ್ಯ ಕುಲಾಲ್ ಅವರ ಸಂಕಲನ, ಪೂರ್ಣೇಶ ಶಿಶಿಲ ಅವರ ಛಾಯಾಗ್ರಹಣ ಮತ್ತಷ್ಟು ಕಳೆ ನೀಡಿವೆ. ಸಂತೋಷ್ ಶೆಟ್ಟಿ ಕುಂಬ್ಳೆ ಮತ್ತು ಸುಚಿತ್ರ ಡಿ. ವರ್ಮ ಇವರ ನಿರ್ಮಾಣದಲ್ಲಿ ಈ ಭಕ್ತಿಗೀತೆ ಸಿದ್ಧವಾಗಿದೆ.
ಈ ಭಕ್ತಿಗೀತೆಯ ಭವ್ಯ ಬಿಡುಗಡೆ ಕಾರ್ಯಕ್ರಮವು ಮೂರನೇ ಜನವರಿ 2026, ಶನಿವಾರದಂದು ಪಡಿಲ್ ಅಳಪೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ ಪೂರ್ವಕವಾಗಿ ಮತ್ತು ಅದ್ದೂರಿಯಾಗಿ ನಡೆಯಿತು.
ಈ ಗೀತೆಯ ಪೋಸ್ಟರ್ ವಿನ್ಯಾಸವನ್ನು ಲಕ್ಷ್ಮೀಶ ಸುವರ್ಣ ಅವರು ರೂಪಿಸಿದ್ದು, ಮಾರ್ಕೆಟಿಂಗ್ ಜವಾಬ್ದಾರಿಯನ್ನು ರಿಚರ್ಡ್ ಪಿಂಟೊ ಅವರು ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಉದ್ಯಮಿ ಶ್ರೀರಾಮ ಪ್ರಸಾದ್ (ಬೆಂಗಳೂರು), ಸಂಗೀತ ನಿರ್ದೇಶಕ ಸಂದೇಶ ಬಾಬಣ್ಣ, ಶಿನೈ ವಿ. ಜೋಸೆಫ್, ಸಾಹಿತಿ ಶಿವಪ್ರಸಾದ್ ಶಾನುಭಾಗ್, ಗಾಯಕ ರಾಮ್ ಕುಮಾರ್ ಅಮೀನ್, ಗೋಪಾಲಕೃಷ್ಣ ಪ್ರಭು ಹಾಗೂ ಲೆಕ್ಕಿಗ ನವೀನ್ ಕುಮಾರ್ ಬೋಂದೇಲ್ ಅವರುಗಳು ಸಹಕಾರ ನೀಡಿದರು.
ಭಕ್ತಿಗೀತೆ ಧನಂಜಯ ವರ್ಮ ಯೂಟ್ಯೂಬ್ ಚಾನೆಲ್ ಮೂಲಕ ಸಾರ್ವಜನಿಕರಿಗೆ ಲಭ್ಯವಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ, ಆಶೀರ್ವಾದ ನೀಡಬೇಕೆಂದು ತಂಡವು ಮನವಿ ಮಾಡಿಕೊಂಡಿದೆ.

