ಬಂಟ್ವಾಳ: ಕೆಟ್ಟು ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ..!!

Prakhara News
1 Min Read

ಬಂಟ್ವಾಳ: ನೂತನವಾಗಿ ನಿರ್ಮಿತವಾಗಿ ಸಂಚಾರಕ್ಕೆ ಮುಕ್ತವಾಗಿರುವ ಕಲ್ಲಡ್ಕ ಮೇಲ್ಸೇತುವೆಯಲ್ಲಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಇನ್ನೊಂದು ಲಾರಿ ಡಿಕ್ಕಿಯಾದ ಘಟನೆ ನಡೆದಿದೆ.

ಚಾಲಕ ಉಪ್ಪಿನಂಗಡಿ ನಿವಾಸಿ ಖಲೀಲ್ ಎಂಬಾತ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದು, ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಕಂಪೆನಿಯೊಂದರ ಐಸ್ ಕ್ರೀಮ್ ಸಾಗಿಸುವ ಪ್ರೀಝರ್ ವಾಹನ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಲಾರಿ ಸಂಪೂರ್ಣ ಜಖಂಗೊಂಡಿದೆ. ಕಳೆದ ಎರಡು ದಿನಗಳಿಂದ ಲಾರಿಯೊಂದು ಕಲ್ಲಡ್ಕ ಪ್ಲೈ ಓವರ್ ಮೇಲೆ ಕೆಟ್ಟು ನಿಂತಿದ್ದು, ಲಾರಿ ಚಾಲಕನಿಗೆ ಮುಂಜಾನೆ ವೇಳೆ ಕಣ್ಣಿಗೆ ಕಾಣದೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

ನೂತನ ಪ್ಲೈ ಓವರ್ ನಲ್ಲಿ ಇನ್ನೂ ಕೂಡ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಬೀದಿ ದೀಪಗಳ ಅಳವಡಿಕೆಯಾಗಿಲ್ಲ, ಮತ್ತು ಕೆಟ್ಟು ನಿಂತ ಲಾರಿಗೆ ಯಾವುದೇ ಸೂಚನ ಫಲಕ ಕೂಡ ಅಳವಡಿಸಿರಲಿಲ್ಲ ಎಂಬ ಆರೋಪ ಕೇಳಿ ಬಂದಿವೆ. ಘಟನಾ ಸ್ಥಳಕ್ಕೆ ಟ್ರಾಫಿಕ್ ಪೋಲೀಸರು ಬೇಟಿ ನೀಡಿದ್ದಾರೆ.

Share This Article
Leave a Comment